ಮಂಡ್ಯ ಜಿಲ್ಲೆ ಹುಲಿಕೆರಿ ಗ್ರಾಪಂ ಕಚೇರಿಯ ನೌಕರನ ಮೇಲೆ ಹಲ್ಲೆ ಖಂಡಿಸಿದ ರಾಜ್ಯಾಧ್ಯಕ್ಷ ಮಹಾಂತೇಶ ಖೋತ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕ ಹುಲಿಕೆರಿ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನೌಕರನಾದ ಶ್ರೀ ನವೀನ ಕುಮಾರ ಅವರ ಮೇಲೆ ಹಲ್ಲೆ ಖಂಡಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ರಾಜ್ಯಾಧ್ಯಕ್ಷ್ಯ ಮಹಾಂತೇಶ ಖೋತ ಒತ್ತಾಯ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಸಣ್ಣಪುಟ್ಟ ಕಾರಣಗಳಿಗಾಗಿ ಅಥವಾ ಕಾನೂನುಬಾಹಿರ ಬೇಡಿಕೆಗಳು ಈಡೇರಲಿಲ್ಲ ಎಂಬ ಕಾರಣಕ್ಕೆ ಈ ಸಿಬ್ಬಂದಿಗಳ ಮೇಲೆ ದೈಹಿಕ ಮತ್ತು ಮಾನಸಿಕ ಹಲ್ಲೆ ನಡೆಸುತ್ತಿರುವುದು ಅತ್ಯಂತ ಖಂಡನೀಯ.ಸರಕಾರಿ ನೌಕರರ ಮೇಲೆ ಹಲ್ಲೆ ಮಾಡುವುದು ಕೇವಲ ವ್ಯಕ್ತಿಯ ಮೇಲಿನ ಹಲ್ಲೆಯಲ್ಲ.ಅದು ಕಾನೂನು ಮತ್ತು ವ್ಯವಸ್ಥೆಯ ಮೇಲಿನ ಹಲ್ಲೆಯಾಗಿದೆ. ಇಂತಹ ಕೃತ್ಯಗಳಿಂದಾಗಿ...

















