ಬೆಳಗಾವಿ:
ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಸನ್ನಿಹಿತವಾಗಿದೆ. ಘಟಾನಘಟಿಗಳ ನಡುವೆ ಹಲವು ಹೊಸ ಮುಖಗಳುಇ ಸಹ ಡಿಕೆ ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಸದ್ಯ ವಾಟ್ಸಪ್ ನಲ್ಲಿ 20 ಸಾಂಭವ್ಯ ಸಚಿವರ ಪಟ್ಟಿ ಹರಿದಾಡುತ್ತಿದ್ದ ವಿಚಿತ್ರ ಎನು ಎಂದರೆ 20 ಸಾಂಭವ್ಯ ಸಚಿವರ ಪಟ್ಟಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಚೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೆಸರಿಲ್ಲ. ಬದಲಾಗಿ ಅಥಣಿಯ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೆಸರಿದ್ದು ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸಂಪುಟದಿಂದ ಹೊರಗಿಡಲಾಯ್ತೆ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಸಧ್ಯ ವಾಟ್ಸಪ್ ನಲ್ಲಿ ಹರಿದಾಡ್ತಿರೋ ಸಾಂಭವ್ಯ ಸಚಿವರ ಪಟ್ಟಿಯಲ್ಲಿ ಲಕ್ಷ್ಮಣ ಸವದಿ,ಪಿ ಎಮ್ ನರೇಂದ್ರಸ್ವಾಮಿ, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ,ಕೆ ಎಸ್ ಬಸವಂತಪ್ಪ, ಬಿ ನಾಗೇಂದ್ರ, ಟಿ ರಘುಮೂರ್ತಿ, ಬಿ ಝೆಡ್ ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್,ಸಂತೋಷ್ ಲಾಡ್,ಮಧು ಬಂಗಾರಪ್ಪ, ಪುಟ್ಟುರಂಗಶೆಟ್ಟಿ, ಮಾಂಕಾಳ ವೈದ್ಯ, ಅಜಯ್ ಸಿಂಗ್,ಎನ್ ಚಲುವರಾಯ ಸ್ವಾಮಿ, ಕೆ ಎಮ್ ಶಿವಲಿಂಗೇಗೌಡ, ಹೆಚ್ ಸಿ ಬಾಲಕೃಷ್ಣ, ಗಾಯತ್ರಿ ಶಾಂತೇಗೌಡ,ಬಸವರಾಜ್ ರಾಯರೆಡ್ಡಿ,ವಿಜಯಾನಂದ ಕಾಶಪ್ಪನವರ್, ಹೆಸರಿದೆ. ಬೆಂಗಳೂರಿನಲ್ಲಿ ಮಾತನಾಡಿರುವ ಶಾಸಕ ಲಕ್ಷ್ಮಣ ಸವದಿಯವರು ತಮ್ಮ ಸಚಿವ ಸ್ಥಾನದ ಬಗ್ಗೆ ಖುದ್ದು ಹೇಳಿಕೆ ನೀಡಿದ್ದು ಸಚಿವ ಸ್ಥಾನ ಸ್ವೀಕರಿಸಲು ಬರುವಂತೆ ಕರೆ ಬಂದಿದೆ ಎಂದು ಖಚಿತಪಡಿಸಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಏಕಮಾತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸತೀಶ್ ಜಾರಕಿಹೊಳಿ ಕಾರ್ಯನಿರ್ವಹಿಸುತ್ತಿದ್ದು ಸತೀಶ್ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರೆ ಇತ್ತ ಸವದಿ ಹಾಗೂ ಹೆಬ್ಬಾಳಕರ್ ಡಿಕೆಶಿ ಶಿವಕುಮಾರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಪಕ್ಷ ಎಂದಮೇಲೆ ನಾವೆಲ್ಲ ಒಂದೇ ಎನ್ನುವ ನಾಯಕರು ಒಳೊಳಗೆ ಆಪ್ತತೆ ಮತ್ತು ಆದ್ಯತೆ ಎಂದು ಬಂದಾಗ ಒಬ್ಬೊಬ್ಬರು ಒಬ್ಬೊಬ್ಬ ನಾಯಕರ ಜೊತೆಗೆ ಗುರುತಿಸಿಡಿದ್ದರು. ಸದ್ಯ ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ಸಿಕ್ಕಿದ್ದು ಹೆಬ್ಬಾಳಕರ್ ಅವರನ್ನು ಸಂಪುಟದಿಂದ ದೂರ ಇಟ್ಟಿರುವುದರ ಹಿಂದಿನ ಡಿಕೆಶಿ ರಾಜಕೀಯ ತಂತ್ರ ಏನೇಂದು ತಿಳಿದುಬರಬೇಕಿದೆ.











