ಜಿಲ್ಲೆಬೆಳಗಾವಿ

ವಿಶ್ವಕ್ಕೆ ಪಸರಿಸಿದ ಹಿರೇಮಠದ ಸಾಮಾಜಿಕ ಕೊಡುಗೆ! ಶ್ರೀಗಳ ಕಾರ್ಯಕ್ಕೆ ಮೆಚ್ಚುಗೆ

ಬೆಳಗಾವಿ
ಹಾರೂಗೇರಿಯ ಶ್ರೀ ಬಿ.ಆರ್.ದರೂರು ಸಂಶೋಧನಾ ಕೇಂದ್ರದ ಮೂಲಕ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಶಿವಲೀಲಾ ಹಿರೇಮಠ ಅವರು ಎಂಪಿಎಲ್ ಪದವಿಗಾಗಿ ಸಲ್ಲಿಸಿದ ಸಂಶೋಧನಾ ಪ್ರಬಂಧ ಹುಕ್ಕೇರಿ ಹಿರೇಮಠದ ಸಾಮಾಜಿಕ ಮತ್ತು ಸಂಸ್ಕೃತಿಕ ಕೊಡುಗೆಗಳು ಗ್ರಂಥದ ಇಂಗ್ಲಿಷ್ ಅನುವಾದ ಕೃತಿಯನ್ನು ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಶ್ರೀ‌ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದ ಹುಕ್ಕೇರಿ ಶಾಖೆಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಬಿಡುಗಡೆಗೊಳಿಸಿ ಮಾತನಾಡಿದರು.
ನಮ್ಮ ವಿಶ್ವ ವಿದ್ಯಾನಿಲಯದಿಂದ ಹೊರ ಬಂದ ಸಂಶೋಧನಾ ಗ್ರಂಥ ಕನ್ನಡದಲ್ಲಿ ಶಿವಲೀಲಾ ಹಿರೇಮಠ ಅವರು ಪ್ರಬಂಧ ಮಂಡಿಸಿ ಕರ್ನಾಟಕಕ್ಕೆ ಪರಿಚಯಿಸಿದರೆ ನಿವೃತ್ತ ಮರಾಠಿ ಪ್ರಾಧ್ಯಾಪಕಿ ಪ್ರೊ ಶಾಲಿನಿ ದೊಡಮನಿ ಅವರು ಮರಾಠಿಯಲ್ಲಿ ಅನುವಾದ ಮಾಡಿ ಮಹಾರಾಷ್ಟ್ರಕ್ಕೆ ಪರಿಚಯಿಸಿದರೆ, ಡಾ. ಗುರುದೇವಿ ಹುಲ್ಲೆಪನವರಮಠ ಇಂಗ್ಲಿಷಿನಲ್ಲಿ ಅನುವಾದ ಮಾಡಿ ಇಡೀ ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಿರುವುದು ನಮಗೆ ಅತೀವ ಸಂಗೋಷ ತಂದಿದೆ ಎಂದರು.
ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಕನ್ನಡದ ಸ್ವಾಮಿಗಳಾಗಿ ಕನ್ನಡ ಉಳಿಸಿ ಬೆಳೆಸಿದ್ದನ್ನು ನಾವು ಕೇಳಿದ್ದೇವೆ. ಇವತ್ತು ಅವರನ್ನು ಮುಖಃತ ಭೇಟಿಯಾಗಿ ಅವರ ಮಠದ ಅದ್ಬುತವಾದ ಸಾಹಿತ್ಯ ಗ್ರಂಥ ಬಿಡುಗಡೆಗೊಳಿಸಿರುವುದು ನಮಗೆ ಸಂತೋಷ ತಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಾರೋಗೆರಿಯ ಖ್ಯಾತ ಸಾಹಿತಿ ಡಾ. ವಿ.ಎಸ್.ಮಾಳಿ ಮಾತನಾಡಿ, ಹುಕ್ಕೇರಿ ಹಿರೇಮಠ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಕೊಡುಗೆಯನ್ನು ಅಪಾರವಾಗಿ ನೀಡಿದೆ. ಇದಕ್ಕೆ ಮಾರ್ಗದರ್ಶಕರಾಗುವ ಸೌಭಾಗ್ಯ ನಮಗೆ ಒದಗಿರುವುದು ನನ್ನ ಸೌಭಾಗ್ಯ ಎಂದರು.
ರಾಣಿ‌ ಚನ್ನಮ್ಮ ವಿವಿಯ ಪ್ರಾಧ್ಯಾಪಕ ಎಂ.ಎಸ್.ಗಂಗಾಧರಯ್ಯ ಕೃತಿಯನ್ನು ಪರಿಚಯಿಸಿ ಕೃತಿಯಲ್ಲಿರುವ ಮಹತ್ವಪೂರ್ಣ ವಿಚಾರವನ್ನು ತಿಳಿಸಿದರು.
ಪ್ರಾರಂಭದಲ್ಲಿ ಡಾ. ಗುರುದೇವಿ ಹುಲ್ಲೆಪನವರ‌ಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ಅಷ್ಟೇ ಅಲ್ಲ. ಇಡೀ ಕರ್ನಾಟಕದಲ್ಲಿ ಕನ್ನಡದ ಧ್ವನಿಯಾಗಿ ನಿಂತವರು ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು. ಇವರ ಶ್ರೀಮಠದ ಅದ್ಬುತ ಗ್ರಂಥವನ್ನು ಇಂಗ್ಲಿಷಿನಲ್ಲಿ ಅನುವಾದ ಮಾಡಿರುವ ಭಾಗ್ಯ ನನಗೆ ಬಂದಿದ್ದು ಸಂತೋಷ ತಂದಿದೆ ಎಂದರು.
ಇದೇ ಸಂದರ್ಭದಲ್ಲಿ ಕೃತಿಕಾರರಾದ ಪ್ರೊ.ಶಿವಲೀಲಾ ಹಿರೇಮಠ ಕನ್ನಡ ಉಪನ್ಯಾಸಕಿ ಸರಕಾರಿ ಪದವಿ ಕಾಲೇಜು ಕಿತ್ತೂರು, ಪ್ರೊ. ರೀಟಾ ಬಣಗಾವಿ, ಶಾಲಿನಿ ದೊಡಮಿ ಮರಾಠಿ ಪ್ರಾಧ್ಯಾಪಕಿ‌ ಇವರಿಗೆ ವಿಶೇಷವಾದ ಗೌರವನ್ನು ಸಲ್ಲಿಸಲಾಯಿತು.
ಸಾನ್ನಿದ್ಯವನ್ನು ವಹಿಸಿದ್ದ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ‌ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಡೀ ಕರ್ನಾಟಕದಲ್ಲಿಯೇ ಕನ್ನಡ ವಿಶ್ವವಿದ್ಯಾಲಯ ಇರುವುದು ಅದು ಹಂಪಿ. ಹಂಪಿ ವಿವಿಯಲ್ಲಿ ಶ್ರೀಮಠದ ಪ್ರಬಂಧ ಮಂಡಿಸಿ ಎಂಪಿಲ್ ಆಗಿರುವುದು ನಮಗೆ ಸಂತೋಷ ತಂದಿದೆ. ಪರಮಶಿವಮೂರ್ತಿ ಅವರು ಕುಲಪತಿಗಳಾಗಿ ಇಂದು‌ ಬಿಡುಗಡೆಗೊಳಿಸುವುರ ಮೂಲಕ ಸಂತೋಷ ನೀಡಿದ್ದಾರೆ ಎಂದರು.
ಆಶಾ ಯಮಕನಮರಡಿ ಕಾರ್ಯಕ್ರಮ ನಿರೂಪಿಸಿದರು. ಸರ್ವಮಂಗಳ ಅರಳಿಮಟ್ಟಿ ಹಾಗೂ ಸಂಗಡಿಗರು ಪ್ರಾರ್ಥನೆ ಮಾಡಿದರು. ಈ ಸಂದರ್ಭದಲ್ಲಿ ವಿದ್ವಾನ್ ಸಂಪತಕುಮಾರ ಶಾಸ್ತ್ರೀಗಳನ್ನು, ಶ್ರೀ ಅನ್ನದಾನೇಶ್ವರ ಶಿವಲಿಂಗ ಶಾಸ್ತ್ರೀಗಳನ್ನು ಸನ್ಮಾನಿಸಲಾಯಿತು.
ಗುರುಪೌರ್ಣಿಮ್ಯ ನಿಮಿತ್ತ ಗುರುಗಳಿಗೆ ವಿಶೇಷವಾದ ಗೌರವ ಸಲ್ಲಿಸಿದರು.
ರುದ್ರ ಕೇಸರಿ ಮಠದ ಸ್ವಾಮೀಜಿ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.

TV24 News Desk
the authorTV24 News Desk

Leave a Reply