


ಬೆಳಗಾವಿ:
ಬಾವಿಯಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷಗೊಂಡಿದೆ ಸಮಾನ್ಯವಾಗಿ ನದಿ ಹಳ್ಳಕೊಳ್ಳಗಳಲ್ಲಿ ಕಾಣಸಿಗುವ ಮೊಸಳೆ ಬಾವಿಗೆ ಹೇಗೆ ಬಂತು ಎಂದು ಸ್ಥಳೀಯರು ದಂಗಾಗಿದ್ದಾರೆ.
ಬಾವಿಯಲ್ಲಿ ಮೊಸಳೆ ಕಂಡು ಸ್ಥಳೀಯರು ಅಚ್ಚರಿಗೊಳಗಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ನಂದಿಕುರಳಿ ಗ್ರಾಮದ ಶಿವಪ್ಪ ಹಿರೇಕುರಬರ ಎಂಬುವವರ ಬಾವಿಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದು ಸುಮಾರು 50 ಅಡಿ ಆಳದ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.
ಮೊಸಳೆ ಕಂಡು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿಯನ್ನು ಸ್ಥಳೀಯರು ನೀಡಿದ್ದರು.ಅರಣ್ಯ ಇಲಾಖೆ, ಅಗ್ನಿಶಾಮಕದಳದ ಸಿಬ್ಬಂಧಿಗಳು ಮೊಸಳೆ ರಕ್ಷಣೆ ಮಾಡಿದ್ದು
ಹಗ್ಗ ಕಟ್ಟಿ ಮೊಸಳೆ ಮೇಲೆತ್ತಿದ ಸಿಬ್ಬಂಧಿಗಳು ಸುರಕ್ಷಿತ ಸ್ಥಳಕ್ಕೆ ಮೊಸಳೆ ರವಾಣಿಸಿದ್ದಾರೆ.








