


ಬೆಳಗಾವಿ:
ಬೆಳಗಾವಿಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆ ಕಡಿಮೆಯಾದರೂ ಸಹ ಅವಾಂತರ ಸೃಷ್ಟಿಯಾವುದು ನಿಂತಿಲ್ಲ.ಬೆಳಗಾವಿ ಹೊರವಲಯದ ಬಳ್ಳಾರಿ ನಾಲಾ ಅವಾಂತರಕ್ಕೆ ಮತ್ತೇ ಬೆಳಗಾವಿಯ ಭತ್ತ ಬೆಳೆಗಾರರು ತಬ್ಬಿಬ್ಬಾಗಿದ್ದಾರೆ.ಮೊದಲನೇ ಹಂತದಲ್ಲಿ ಬಿತ್ತನೆ ಮಾಡಿದ್ದ ಬೆಳೆ ಮಳೆ ಕೊರತೆಯಿಂದ ಹಾನಿಯಾಗಿತ್ತು.ಈಗ ವಿಪರೀತ ಮಳೆಯ ಕಾರಣಕ್ಕೆ ಸಾವಿರಾರು ಎಕರೆ ಪ್ರದೇಶದ ಭತ್ತ ಹಾನಿ ಯಾಗಿದೆ.ಸಾವಿರಾರು ಎಕರೆ ಭತ್ತದ ಗದ್ದೆಗಳನ್ನು ಬಳ್ಳಾರಿ ನಾಲಾ ನೀರು ಆಹುತಿ ಪಡೆದಿದೆ.ದಶಕಗಳಿಂದ ಹೋರಾಟ ನಡೆಯುತ್ತಿದ್ದರೂ ಬಳ್ಳಾರಿ ನಾಲಾ ಹೂಳೆತ್ತುವ ಕಾರ್ಯಕ್ಕೆ ಈವರೆಗೂ ಯಾವುದೇ ಸರ್ಕಾರ ಅಧಿಕೃತ ಚಾಲನೆ ನೀಡಿಲ್ಲ.
ಬೆಳಗಾವಿ ಹೊರವಲಯದ ಯಳ್ಳೂರು ಮಾರ್ಗ ಮಧ್ಯೆ ಸಾವಿರಾರು ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ.ಸದ್ಯ ಹೂಳೆತ್ತದ ಕಾರಣಕ್ಕೆ ರೈತರ ಜಮೀನುಗಳನ್ನು ಬಳ್ಳಾರಿ ನಾಲಾ ನೀರು ಆವರಿಸುತ್ತಿದೆ.ಬಳ್ಳಾರಿ ನಾಲಾ ಪಕ್ಕದ ಜಮೀನುಗಳಲ್ಲಿ ನೀರು ಆವರಸಿ ಅನಾಹುತಕ್ಕೆ ಕಾರಣವಾಗುತ್ತಿದೆ. ದೇಶದಲ್ಲೆ ಪ್ರಸಿದ್ದಿ ಪಡೆದಿರುವ ಬಾಸುಮತಿ ಅಕ್ಕಿಯನ್ನು ಇಲ್ಲಿನ ರೈತರು ಅತೀ ಹೆಚ್ಚು ಬೆಳೆಯುತ್ತಾರೆ.ಬಳ್ಳಾರಿ ನಾಲಾದಿಂದ ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಕೊಳೆಯುವ ಸ್ಥಿತಿಯಲ್ಲಿ ಭತ್ತ ತಲುಪಿದೆ.ತಕ್ಷಣ ಬಳ್ಳಾರಿ ನಾಲಾ ಹೊಳೆತ್ತುವ ಕೆಲಸವನ್ನ ಸರ್ಕಾರ ಮಾಡುವಂತೆ ರೈತ ಮುಖಂಡ ರಾಜು ಮರವೆ ಆಗ್ರಹಿಸಿದ್ದಾರೆ. ಆದರೆ ಸರ್ಕಾರ ಹಾಗೂ ಜಿಲ್ಲಾಡಳಿತ ಕಣ್ಣು ಕಿವಿ ಇದ್ದು ಅವು ಕಾಣದ ಹಾಗೂ ಕೇಳದ ಸ್ಥಿತಿ ತಲುಪಿರೋದು ದುರಂತದ ಸಂಗತಿ!









