Uncategorized

ಬಾಲಕಿಯ ರೇಪ್ ಆಂಡ್ ಮರ್ಡರ್ ಮಾಡಿದ್ದ ಮುದಿಯನಿಗೆ ಮರಣದಂಡನೆ ಶಿಕ್ಷೆ ಪ್ರಕಟಿಸಿದ ಕೋರ್ಟ್! 

ಮಹಾರಾಷ್ಟ್ರ:

ಬಾಲಕಿಯನ್ನು ಪುಸಲಾಯಿಸಿ ರೇಪ್ ಮಾಡಿ ಕೊಂಡಿದ್ದ ಮುದಿಯನಿಗೆ ಮರಣದಂಡನೆ ನೀಡಿ ನ್ಯಾಯಾಲಯದ ಆದೇಶ ಹೊರಡಿಸಿದೆ.ಮರಣದಂಡನೆ ತೀರ್ಪು ನೀಡಿ ಪುಣೆಯ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದ್ದು ಬಾಲಕಿಯ ಸಾವಿಗೆ ನ್ಯಾಯ ಸಿಕ್ಕಂತಾಗಿದೆ. ರೇಪ್ ಆಂಡ್ ಮರ್ಡರ್ ಪ್ರಕರಣ ನಡೆದು ಎರಡೇ ತಿಂಗಳೊಳಗೆ ಶಿಕ್ಷೆ ಪ್ರಕಟಿಸಿದ್ದು ವಿಶೇಷವಾಗಿದ್ದು ಘಟನೆಯು ಪುಣೆ ಜಿಲ್ಲೆಯ ಭೊರ್ ತಾಲೂಕಿನ ನರಸಾಪುರ ಗ್ರಾಮದಲ್ಲಿ‌ ಪ್ರಕರಣ ನಡೆದಿತ್ತು. ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ರೇಪ್ ಮಾಡಿ ನಂತರ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನಾಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿ ಭೀಮರಾವ್ ಕಾಂಬಳೆ(65) ನನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು. ಪೊಲೀಸರು ಎಲ್ಲಾ ರೀತಿಯ ಸಾಕ್ಷಾಧಾರಗಳನ್ನಯ ನ್ಯಾಯಾಲಯದ ಮುಂದೆ ಸಾಭೀತು ಮಾಡುವಲ್ಲಿ ಯಶಸ್ವಿಯಾದ ಹಿನ್ನೆಲೆ ಆರೋಪಿ ಭೀಮರಾವ್ ಕಾಂಬಳೆಗೆ ಮರಣ ದಂಡನೆ ನೀಡಿ ನ್ಯಾಯಾಲಯ ತೀರ್ಪು ಹೊರಡಿಸಿದೆ. ಇನ್ನು ಆರೋಪಿ ಭೀಮರಾವ್ ವಿರುದ್ಧ ಮಹಾರಾಷ್ಟ್ರದಲ್ಲಿ ಹಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು‌‌. ಇನ್ನು
ಸಾರ್ವಜನಿಕರಿಂದಲೂ ಸಹ ತೀವ್ರ ವಿರೋಧ ಹಿನ್ನೆಲೆ
ತ್ವರಿತಗತಿಯಲ್ಲಿ ವಿಚಾರಣೆಯನ್ನು ಕೋರ್ಟ್ ನಡೆಸಿತ್ತು.ವಿಚಾರಣೆ ನಡೆಸಿ ಇಂದು ಕೋರ್ಟ್ ತನ್ನ ತೀರ್ಪು ಹೊರಡಿಸಿದೆ.ಕಳೆದ ಮೇ 1ರಂದು ಬಾಲಕಿಯನ್ನು ರೇಪ್ ಮಾಡಿದ್ದ ಮುದಿಯ ಬಾಬುರಾವ್ ರೇಪ್ ಮಾಡಿದ ನಂತರ ಬಾಲಕಿಯ ಕತ್ತು ಹಿಸುಕಿ ಬಾಬುರಾವ್ ಕೊಲೆ ಮಾಡಿದ್ದ ಸದ್ಯ ಬಾಬುರಾವ್ಗೆ ಮರಣದಂಡನೆ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ.

ಆರೋಪಿ ಬಾಬುರಾವ್ ಕಾಂಬಳೆ
ಸಿಸಿಟಿವಿ ದೃಶ್ಯಾವಳಿಯ ಫೋಟೊ!

ಸಿಸಿಟಿವಿ ದೃಶ್ಯಾವಳಿಯ ಫೋಟೊ!

TV24 News Desk
the authorTV24 News Desk

Leave a Reply