


ಬೆಳಗಾವಿ:
ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಗಳ ಜೀವನಾಡಿ ಅವಳಿ ಜಿಲ್ಲೆಗಳ ಅಮೃತಕಲಶವೇ ಎಂದು ಕರೆಯಲ್ಪಡುವ ರಾಜಾಲಖಮನಗೌಡ ಜಲಾಶಯ( ಹಿಡಕಲ್ ಜಲಾಶಯ) ಶೇಕಡಾ 98 ರಷ್ಟು ಭರ್ತಿಯಾಗಿದೆ. 51 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 48.629 ಟಿಎಂಸಿ ನೀರು ಸಂಗ್ರಹವಾಗಿದ್ದು ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಸದ್ಯ ಬಳಕೆಗೆ ಲಭ್ಯವಿರುವ ನೀರು 46 ಟಿಎಂಸಿಯಷ್ಟು ಸಂಗ್ರಹವಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟಪ್ರದೇಶಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಜಲಾಶಯಕ್ಕೆ ಅಪಾರ ಪ್ರಮಾಣದ ಒಳಹರಿವು ದಾಖಲಾಗಿದೆ. ಮಳೆ ಮಂದಗತಿಯಲ್ಲಿದ್ದರೂ ಸಹ ನೀರು ಕ್ರಮೇಣ ಸಂಗ್ರವಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಜಲಾಶಯ ಭರ್ತಿಯಾಗಲು ಕೇವಲ ಇನ್ನೆರಡು ಟಿಎಂಸಿ ಮಾತ್ರ ಬಾಕಿ ಇದ್ದು ಇನ್ನೇರಡು ದಿನಗಳಲ್ಲಿ ಕ್ರಸ್ಟ್ ಗೇಟುಗಳ ಮೂಲಕ ನೀರು ಹೊರ ಹಾಕುವ ವಿಚಾರದಲ್ಲಿ ಅಧಿಕಾರಿಗಳಿದ್ದಾರೆ ಎನ್ನಲಾಗುತ್ತಿದೆ. ಬೆಳಗಾವಿ ಬಾಗಲಕೋಟೆ ಹಾಗೂ ಧಾರವಾಡ ಜಿಲ್ಲೆಗಳಿಗೆ ಹಿಡಕಲ್ ಜಲಾಶಯದ ನೀರು ಸದ್ಭಳಕೆ ಆಗಲಿದ್ದು ಜನರಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ರೈತಾಪಿ ವರ್ಗವೂ ಸಹ ಸಂತಸಗೊಂಡಿದೆ.











