



ಬೆಳಗಾವಿ:
ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ವಿರುದ್ಧ ಜಿಲ್ಲಾಡಳಿತ ಸಾರಿದ್ದ ಸಮರದ ನಂತರ ಪ್ರಕರಕಣಕ್ಕೆ ಇಡಿ ಎಂಟ್ರಿಯಾಗಿದ್ದು ದಾಳಿ ನಡೆಸಿದ ಇಡಿ ತನ್ನ ಪತ್ರಿಕಾ ಪ್ರಕಟನೆಯನ್ನು ಹೊರಡಿಸಿದೆ. ಪ್ರಕರಣದಲ್ಲಿ ಶಿವಂ ಅಸೋಸಿಯೇಟ್ಸ್ ಹಾಗೂ ಶಿವಾನಂದ ನೀಲಣ್ಣವರ್ ಮಾಡಿದ ವಂಚನೆಯನ್ನು ಇಡಿ ಇಂಚಿಂಚು ಬಿಚ್ಚಿಟ್ಟಿದೆ. ಶಿವಂ ಅಸೋಸಿಯೇಟ್ಸ್ ಹಾಗೂ ಅದರ ಅಂಗ ಸಂಸ್ಥೆಗಳಿಂದ ಸುಮಾರು 2110 ಕೋಟಿ ವಂಚನೆಯಾಗಿದೆ ಎಂದು ಇಡಿ ಮಾಹಿತಿ ನೀಡಿದೆ.ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ದಾಖಲಾದ ದೂರಿನ ನಂತರ
ಇಡಿ ಅಧಿಕಾರಿಗಳು ಶಿವಾನಂದ ನೀಲಣ್ಣವರ್ ಅವರ ಮನೆ ಹಾಗೂ ಕಚೇರಿಯ ಮೇಲೆ ದಾಳಿ ಮಾಡಿದ್ದರು.
2110 ಕೋಟಿ ರೂ ವಂಚನೆಯಾಗಿದ್ದು ಇಡಿ ದಾಳಿಯಲ್ಲಿ ಬೆಳಕಿಗೆ ಬಂದಿದ್ದು ಅದರಲ್ಲಿ ಹೂಡಿಕೆದಾರರಿಗೆ 333.89 ಕೋಟಿ ರೂ ಮಾತ್ರ ವಾಪಸ್ ಆಗಿರುವುದು ಕಂಡು ಬಂದಿದೆ.
ಸಾರ್ವಜನಿಕರ ಹಣವನ್ನು ಶೇರು ಮಾರುಕಟ್ಟೆ,ಬ್ಯಾಂಕ್ ನಿಶ್ಚಿತ ಠೇವಣಿಗಳು ಹಾಗೂ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಲಾಗಿತ್ತು ಎನ್ನಲಾಗಿದೆ.
ಜಾಲದಲ್ಲಿ ಶಿವಂ ಅಸೋಸಿಯೇಟ್ಸ್, ಸುಭಾಷ್ ರಾಮನಗೌಡ ನಂದರಗಿ,ಮಹೇಶ್ ಎಸ್ ನೀಲಣ್ಣವರ್,ಶಿವಂ ಪ್ರೊಡಕ್ಷನ್ಸ್, ಶಿವಂ ಲೈಫ್ಲೈನ್ ಪ್ರೈವೇಟ್ ಲಿಮಿಟೆಡ್,ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್, ಸೇರಿದಂತೆ ಕೆಲ ವ್ಯಕ್ತಿಗಳು ವ್ಯವಹಾರದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.
ಅಕ್ರಮ ಹಣಕಾಸು ವಹಿವಾಟು,ಬೇನಾಮಿ ಆಸ್ತಿ ಹೂಡಿಕೆಗೆ ಸಂಬಂಧಿಸಿದಂತೆ ಡಿಜಿಟಲ್ ಸಾಕ್ಷಿಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಇಡಿ ವಶಕ್ಕೆ ಪಡೆದುಕೊಂಡಿದೆ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.










