Uncategorized

ಸಿಎಂ ಆದ ಬಳಿಕ‌ ಮೊದಲ ಬಾರಿಗೆ ಡಿಕೆಶಿ ಬೆಳಗಾವಿಗೆ! ಎನೇನ್ ಪ್ರೋಗ್ರಾಂ ಇದೆ ಗೊತ್ತಾ?

ಬೆಳಗಾವಿ:

ಸಿಎಂ ಡಿಕೆಶಿ ಬೆಳಗಾವಿಗೆ ಬರುವ ಮುನ್ನಾ ದಿನವೇ ಮಹಾರಾಷ್ಟ್ರ ದಲ್ಲಿ ಮಿಂಚಿನ ಬೆಳವಣಿಗೆಯಾಗಿದೆ.ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯನ್ನು ಮಹಾರಾಷ್ಟ್ರ ಸರ್ಕಾರ ಮಾಡಿದೆ‌.ಮುಂಬೈನ ರಾಜಭವನದಲ್ಲಿ ನಡೆದ ಸಮಿತಿ ಸಭೆಯಲ್ಲಿ ಘಟಾನುಘಟಿ ನಾಯಕರು ಭಾಗಿಯಾಗಿದ್ದಾರೆ.
ಮಾಜಿ ಸಿಎಂ ಶರತ್ ಪವಾರ್, ಡಿಸಿಎಂಗಳಾದ ಏಕನಾಥ ಶಿಂಧೆ, ಸುನೇತ್ರಾ ಪವಾರ್,ನಿತೇಶ ರಾಣಾ ಸೇರಿ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸದಸ್ಯರು ಭಾಗಿಯಾಗಿದ್ದಾರೆ.ಮಹಾ ಸಿಎಂ ದೇವೆಂದ್ರ ಫಡ್ನವಿಸ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಡದ್ರೋಹಿ ಎಂಇಎಸ್ ಮುಖಂಡರೂ ಸಹ ಭಾಗಿಯಾಗಿದ್ದಾರೆ.ಸಭೆಯಲ್ಲಿ ಮಹಾರಾಷ್ಟ್ರ ಸರ್ಕಸರ ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದೆ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ಬೆನ್ನಿಗೆ ನಿಲ್ಲುವುದು,ಈಗಾಗಲೇ ಗಡಿ ಭಾಗದ ಮರಾಠಿ ಭಾಷಿಕರಿಗೆ ಶಿಕ್ಷಣದಲ್ಲಿ ಮೀಸಲಾತಿ, ಹೆಲ್ತ್ ಸ್ಕೀಂ ಅನ್ನು ಮಹಾ ಸರ್ಕಾರ ನೀಡುತ್ತಿದ್ದು ಒಕ್ಕೂಟ ವ್ಯವಸ್ಥೆ ಧಿಕ್ಕರಿಸಿ ಕರ್ನಾಟಕದ ಗಡಿ ಪ್ರದೇಶದ ಮರಾಠಿ ಭಾಷಿಕರಿಗೆ ವಿವಿಧ ಯೋಜನೆ ಘೋಷಣೆ ಮಾಡಿದೆ.ಇತ್ತ ಕೇಂದ್ರ ಗೃಹಸಚಿವ ಅಮಿತ್ ಶಾ ನೇತೃತ್ವದಲ್ಲಿ ಗಡಿ ವಿವಾದ ಸಂಬಂಧ ಸಭೆ ನಿಗದಿಯಾಗಿದ್ದು ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ತೀವ್ರಗೊಳಿಸಲು ಗಡಿ ಉನ್ನತ ಮಟ್ಟದ ಸಮಿತಿ ನಿರ್ಧಾರ ಮಾಡಿದೆ.

TV24 News Desk
the authorTV24 News Desk

Leave a Reply