Uncategorized

ಮೈದುಂಬಿದ ಮಲಪ್ರಭೆ!ಬಾಗೀನ ಅರ್ಪಿಸಿ ತಾಯೇ ಸಮೃದ್ಧಿ ನೀಡು ಎಂದು ರೈತರ ಪ್ರಾರ್ಥನೆ!

ಬೆಳಗಾವಿ:
ರಾಜ್ಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ವರುಣನ ಅಬ್ಬರದಿಂದ ನದಿ ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ಅದರಲ್ಲೂ ಸಪ್ತನದಿಗಳ ನಾಡು ಎಂದು ಕರೆಸಿಕೊಳ್ಳುವ ಬೆಳಗಾವಿಯಲ್ಲಿ ಮಲಪ್ರಭಾ ನದಿ ಮೈದುಂಬಿಕೊಂಡಿದೆ. ಮಲಪ್ರಭಾ ನದಿ ಮೈದುಂಬಿಕೊಂಡು ಹರಯುತ್ತಿದ್ದು ರೈತರ ಮಕ್ಕಳ ಖುಷಿಯನ್ನು ನೂರ್ಮಡಿಗೊಳಿಸಿದೆ.ಆ ಹಿನ್ನೆಲೆಯಲ್ಲಿ ರೈತರು‌ ಹಾಗೂ ಗ್ರಾಮಸ್ಥರು ಸೇರಿಕೊಂಡು ನದಿಗೆ  ಬಾಗಿನ ಅರ್ಪಣೆ ಮಾಡಿದ್ದಾರೆ.ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಬಾಗಿನ ಅರ್ಪಣೆ ಮಾಡಲಾಗಿದ್ದು ಮಲಪ್ರಭಾ ನದಿಗೆ ಒಳಹರಿವು ಹೆಚ್ಚಳ ಹಿನ್ನೆಲೆ ಬಾಗಿನ ಅರ್ಪಿಸಲಾಗಿದೆ.ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಪತ್ನಿ ರೋಹಿಣಿ ಪಾಟೀಲ ನೇತೃತ್ವದಲ್ಲಿ ಬಾಗಿನ ಅರ್ಪಣೆ ಮಾಡಲಾಗಿದ್ದು ಇದೇ ವೇಳೆ ಮಲಪ್ರಭಾ ನದಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಿಪೂರ್ವಕವಾಗಿ ನಾಡಿನ ಸಮೃದ್ದಿಗಾಗಿ ಪೂಜಾ ಕೈಂಕರ್ಯಗಳನ್ನು ಸಲ್ಲಿಸಲಾಗಿದೆ.ಉತ್ತಮ ಮಳೆ–ಸಮೃದ್ಧ ಬೆಳೆಗಾಗಿ ವಿಶೇಷ ಪ್ರಾರ್ಥನೆ ಮಾಡಲಾಗಿದೆ.ಗಂಗಾಂಬಿಕಾ ದೇವಾಲಯದಿಂದ ಮಲಪ್ರಭಾ ನದಿತಟದವರೆಗೆ ಭವ್ಯ ಮೆರವಣಿಗೆ ಮೂಲಕ ರೈತರು ಹಾಗೂ ಗ್ರಾಮಸ್ಥರು ಕೂಡಿಕೊಂಡು ನದಿಗೆ ಬಾಗಿನ ಅರ್ಪಣೆ ಮಾಡಿ ಖುಷಿಪಟ್ಟಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!