

ಬೆಳಗಾವಿ/ ಮಹಾರಾಷ್ಟ್ರ
ಮಹಾರಾಷ್ಟ್ರದ ಪ್ರಸಿದ್ಧ ಪ್ರವಾಸಿ ತಾಣ ಅಂಬೋಲಿ ಬಳಿ ಇರುವ ಕವಲೇಸಾದ್ ಪಾಯಿಂಟ್ ನಲ್ಲಿ ಆಳವಾದ ಕಂದಕಕ್ಕೆ ಬಿದ್ದು ವ್ಯಕ್ತಿ ಕಣ್ಮರೆಯಾದ ಘಟನೆ ನಡೆದಿದೆ. ಮಹಾರಾಷ್ಟ್ರದ ಸಿಂಧದುರ್ಗ ಜಿಲ್ಲೆಯ ಕವಲೇಪಾಯಿಂಟ್ ನಲ್ಲಿ ನಿನ್ನೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಕರ್ನಾಟಕದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ನಿವಾಸಿ ಆಯೂಬ್ ಸಯ್ಯದ್(50) ಕವಲೇಪಾಯಿಂಟ್ ನಲ್ಲಿ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ. ನಿನ್ನೆ ಮಹಾರಾಷ್ಟ್ರದ ಅಂಬೋಲಿ ಹಾಗೂ ಕವಲೇಪಾಯಿಂಟ್ ವೀಕ್ಷಣೆಗೆಂದು ಗೆಳೆಯರ ಜೊತೆಗೆ ಅಯೂಬ್ ಹೋಗಿದ್ಚರು ಎನ್ನಲಾಗಿದೆ. ನಿನ್ನೆ ಕವಲೇ ಪಾಯಿಂಟ್ ವೀಕ್ಷಣೆಯ ವೇಳೆ ಘಟನೆ ನಡೆದಿದ್ದು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಅಂಬೋಲಿ ಪೊಲೀಸರು ಹಾಗೂ ಅಗ್ನಿಶಾಮಕದಳ ಎಸ್ ಆಡಿ ಆರ್ ಎಫ್ ತಂಡ ಬೀಡು ಬಿಟ್ಟು ಕಣ್ಮರೆಯಾಗಿರುವ ಅಯೂಬ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ನಿರಂತರ ಮಳೆ ಹಾಗೂ ದಟ್ಟವಾದ ಮಂಜು ಕಾರ್ಯಾಚರಣೆಗೆ ಅಡ್ಡಿಯಾಗಿ ನಿನ್ನೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು ಮುಂಜಾನೆಯಿಂದ ಕಾಣೆಯಾಗಿರುವ ಆಯೂಬ್ ಗಾಗಿ ಪೊಲೀಸರು ಹುಟುಕಾಟ ನಡೆಸಿದ್ದಾರೆ. ಆದರೆ ಈವರೆಗೆ ಅಯೂಬ್ ಎಲ್ಲಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿಲ್ಲ. ಅಂಬೋಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.









