


ಬೆಳಗಾವಿ:
ಬೆಳಗಾವಿಯಲ್ಲಿ ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದ್ದ ಚಿರತೆ ಕಡೆಗೂ ಸೆರೆಯಾಗಿದೆ.ಬೆಳಗಾವಿ ತಾಲೂಕಿನ ಸುತಗಟ್ಟಿ ಗ್ರಾಮದ ಬಳಿ ಕಾಣಿಸಿಕ್ಕೊಂಡಿದ್ದ ಚಿರತೆ
ಕೆಲ ದಿನಗಳಿಂದ ಗ್ರಾಮಸ್ಥರಿಗೆ ಹಾಗೂ ಬೈಕ್ ಸವಾರರಿಗೆ ಕಾಣಿಸಿಕೊಳ್ಳುತ್ತಿತ್ತು.ಚಿರತೆ ದೃಶ್ಯ ಸೆರೆ ಹಿಡಿದು ಹಲವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸ್ಥಳೀಯರೇ ಮಾಡಿದ್ದರು.
ಕಾಕತಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಸುತಗಟ್ಟಿ ಅರಣ್ಯ ಪ್ರದೇಶದಲ್ಲಿದ್ದ ಚಿರತೆಯನ್ನಹ ಕಡೆಗೂ ಸೆರೆ ಹಿಡಿಯಲಾಗಿದೆ.ಚಿರತೆ ಇರುವಿಕೆಯ ಮಾಹಿತಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರ ನೀಡಿದ್ದರು.ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಅರಣ್ಯ ಇಲಾಖೆ ಅಧಿಕಾರಿಗಳು.
ಚಿರತೆ ಹೆಜ್ಜೆ ಗುರುತಿಸುವ ಮೂಲಕ ಚಿರತೆ ಸೆರೆ ಹಿಡಿಯಲು ಪ್ಲ್ಯಾನ ರೂಪಿಸಿ .
ಚಿರತೆ ಓಡಾಟದ ಬಳಿಕ ಬೋನು ಅಳವಡಿಸಿ ಇಂದು ಚಿರತೆ ಸೆರೆ ಹಿಡಿದ ಹಿನ್ನಲೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು ಚಿರತೆ ಸೆರೆ ಹಿಡಿಯುವ ವಿಡಿಯೋಗಳು ವೈರಲ್ ಆಗಿವೆ.










