Uncategorized

ಆಗಸ್ಟ್ 13 ರಂದು ಕರ್ನಾಟಕ ಬಂದ್ ಬಂದ್ ಬಂದ್! ಎಂದು ಕರೆಕೊಟ್ಟ ವಾಟಾಳ್ ನಾಗರಾಜ್!

ಬೆಳಗಾವಿ:

ಕಾವೇರಿ ಸೇರಿ ವಿವಿಧ ವಿಚಾರಕ್ಕೆ ಆಗಷ್ಟ್ 13 ರಂದು ಕರ್ನಾಟಕ ಬಂದ್ ಕರೆ ನೀಡಿರುವ ಹಿನ್ನೆಲೆ ಇಂದು ಬೆಳಗಾವಿಯಲ್ಲಿ ಕನ್ನಡ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ವಾಟಾಳ್ ನಾಗರಾಜ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು
ರಾಜಕಾರಣಿಗಳಿಗೆ ಬೆಳಗಾವಿ, ಗಡಿ ನಾಡು ಸಮಸ್ಯೆಗಳು ಯಾವುದೇ ಪಕ್ಷದವರಿಗೆ ಬೇಕಾಗಿಲ್ಲ.ಬೆಳಗಾವಿಯಲ್ಲಿ ಕನ್ನಡ ಉಳಿದಿದ್ದರೆ ಅದು ಕನ್ನಡ ಪರ ಸಂಘಟನೆಗಳಿಂದ ಎಂದರು.ಬೆಳಗಾವಿ ಗಡಿ ವಿಚಾರದಲ್ಲಿ ಒಬ್ಬ ಶಾಸಕ, ಸಂಸದ, ಎಂಎಲಸಿ ಗಳು ಬೀದಿ ಹೋರಾಟ ಮಾಡಲಿಲ್ಲ
ಗಟ್ಟಿಯಾಗಿ ಬೆಳಗಾವಿ ವಿಚಾರದಲ್ಲಿ ಮಾತನಾಡಲಿಲ್ಲ
ಬೆಳಗಾವಿಯಲ್ಲಿ ಕಾಟಾಚಾದ ಅಧಿವೇಶನ ನಡೆಸುತ್ತಾರೆ.
ಬೆಳಗಾವಿ ಬಗ್ಗೆಯೇ ವಿಶೇಷವಾಗಿ ಅಧಿವೇಶನದಲ್ಲಿ ಮಾತನಾಡಲಿಲ್ಲ ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಬಗ್ಗೆ ಏನು ಚರ್ಚೆ ಮಾಡುವುದಿಲ್ಲ.ನಮ್ಮ ರಾಜಕಾರಣಿಗಳಿಗೆ ಕರ್ನಾಟಕ ಏಕೀಕರಣ ಬಗ್ಗೆಯೇ ಗೊತ್ತಿಲ್ಲ ಎಂದು ವಾಟಾಳ್ ಹರಿಹಾಯ್ದರು.ಡಿ.ಕೆ.ಶಿವಕುಮಾರ್ ಅವರ ಸರ್ಕಾರವೇ ಇರಲಿ ಯಾವುದೇ ಸರ್ಕಾರವಿರಲಿ ಸರ್ಕಾರ ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಶ್ವೇತ ಪತ್ರವನ್ನ ಬಿಡುಗಡೆ ಮಾಡಲಿ.ಅಖಂಡ ಕರ್ನಾಟಕ ನಮ್ಮದು ಪ್ರತಿಯೊಂದು ಜಿಲ್ಲೆ ಸಮಸ್ಯೆಗೆ ಸರ್ಕಾರ ಸ್ಪಂದಿಸುವ ಕೆಲಸ ಬಳ್ಳಾರಿ ಭೂಗರ್ಭವನ್ನೇ ಲೂಟಿ ಮಾಡಿದ್ದಾರೆ.ಲೂಟಿ ಮಾಡಿದವರೇ ಶಾಸಕರು, ಮಂತ್ರಿ ಆಗ್ತಾರೆ ಇದು ಬೇಸರ ತಂದಿದೆ ಎಂದರು ಇನ್ನು ಮಹದಾಯಿ ಕಳಸಾ-ಬಂಡೂರಿ ಯೋಜನೆ ವಿಚಾರಕ್ಕೆ
ಸರ್ಕಾರಗಳಿಗೆ ಯಾವುದೇ ಶಕ್ತಿಯೇ ಇಲ್ಲ ಚಿಕ್ಕ ಗೋವಾ ರಾಜ್ಯವನ್ನ ಎದುರಿಸಲು ಆಗ್ತಿಲ್ಲ ರಾಜ್ಯದಲ್ಲಿ ನಾಲ್ಕು ಜನ ಕೇಂದ್ರ ಮಂತ್ರಿಗಳಿದ್ದಾರೆ.ಪ್ರಹ್ಲಾದ ಜೋಶಿ, ಶೋಭಾ ಕರಂದ್ಲಾಜೆ, ಸೋಮಣ್ಣ, ಕುಮಾರಸ್ವಾಮಿ ಇದ್ದಾರೆ.ಇವರು ಹೇಳ್ತಾರೆ ಹೇಳ್ತಾರೆ ಕೇಳಬೇಕು ನಾವು ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.ಕಾವೇರಿ ನೀರು ನಿರ್ವಹಣಾ ಸಮಿತಿ ವಿರೋಧ ಪಕ್ಷದವರಿಗೆ ಡಿಕೆಶಿ ಮ್ಯಾಜಿಕ್‌ ಮಾಡಿದ್ರು ಇವರು ಮ್ಯಾಜಿಕ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಂದು ಸಿಎಂ ಡಿಕೆಶಿ ಕುರಿತು ವಾಟಾಳ್ ವ್ಯಂಗ್ಯವಾಡಿದರು.ಕಾವೇರಿ ವಿವಾದ ಇರೋದು ಅದನ್ನ ಬಿಟ್ಟು ಕಬಿನಿಯಿಂದ ನೀರು ಬಿಟ್ಟಿವಿ ಅಂತಾ ಬೂರಡೆ ಬಿಟ್ಟಬಿಟ್ಟರು.ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರ ಗೊತ್ತುವಳಿ ಸ್ವೀಕರಿಸುತ್ತಿಲ್ಲ.ಮಹಾನಗರ ಪಾಲಿಕೆಯಲ್ಲಿ ಬದ್ಧತೆ ಪ್ರದರ್ಶನ ಮಾಡುತ್ತಿಲ್ಲ ಸಿದ್ದರಾಮಯ್ಯ ಸರ್ಕಾರವೂ ಮಾಡಲಿಲ್ಲ
ಈ ಸರ್ಕಾರವು ಮಾಡುತ್ತಿಲ್ಲ ಈಗ ಸಿದ್ದರಾಮಯ್ಯ ಮಗನೇ

ನಗರಾಭಿವೃದ್ಧಿ ಮಂತ್ರಿ
ಬೆಳಗಾವಿಯಲ್ಲಿ ಕನ್ನಡ ಪರ ಗೊತ್ತುವಳಿ ತೆಗೆದುಕೊಳ್ಳುವಂತೆ ಒತ್ತಾಯವಿದೆ.ಇದಕ್ಕಾಗಿ ಕರ್ನಾಟಕ ಬಂದ್ ಗೆ ಕರೆ ಕೊಡ್ತಿವಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಅವಕಾಶ ಕೊಡಬೇಕು
ಆಗಷ್ಟ್ 13 ರಂದು ಕರ್ನಾಟಕ ಬಂದ್ ಕರೆ ಕೊಡಲಾಗಿದೆ
ರಾಜ್ಯಾದ್ಯಂತ ಅದ್ಭುತವಾದ ಬಂದ್ ಆಗಲಿದೆ ವಿರೋಧ ಪಕ್ಷದವರಿಗೆ ಟೋಪಿ ಹಾಕಿದಂತೆ ನಮಗೆ ಟೋಪಿ ಹಾಕಲು ಬರ್ತಿದ್ದಾರೆ ಬಂದ್ ಕೈ ಬಿಡಿಲು ಸರ್ಕಾರ ಹೇಳ್ತಿದೆ ಆದ್ರೆ ಕರ್ನಾಟಕ ಬಂದ್ ಆಗಿಯೇ ಆಗಲಿದೇ ಎಂದ ವಾಟಾಳ್
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ಗೊತ್ತುವಳಿ ಸ್ವೀಕರಿಸದಿದ್ದರೆ

ನಾನೇ ಪಾಲಿಕೆಯನ್ನ ಸೂಪರ್ ಸೀಡ್ ಮಾಡಬೇಕು.
ಬೆಳಗಾವಿ ಪಾಲಿಕೆಯನ್ನ ಸೂಪರ್ ಸೀಡ್ ಮಾಡಲು ಸಚಿವ ಯತೀಂದ್ರ ಗೆ ಹೇಳ್ತಿನಿ ಎಂದು ವಾಟಾಳ್ ನಾಗರಾಜ್ ನಾಗರಾಜ್ ಹೇಳಿದರು.

TV24 News Desk
the authorTV24 News Desk

Leave a Reply

error: Content is protected !!