ಬೆಳಗಾವಿ:
ಸಿಎಂ ಬೆಳಗಾವಿ ಪ್ರವಾಸದ ವೇಳೆ ಮಹಾ ಲೋಪ ಬಯಲಾಗಿದ್ದು
ಶಿಷ್ಟಾಚಾರ ಉಲ್ಲಂಘಿಸಿದ ಡಿಎಚ್ ಓ ಈಶ್ವರ ಗಡಾದಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.ಹಾಗೆಯೇ
ಸಿಎಂ ಆರೋಗ್ಯದ ಜೊತೆ ಆರೋಗ್ಯ ಇಲಾಖೆ ಅಧಿಕಾರಿಗಳು ಚಲ್ಲಾಟವಾಡಿದ್ರಾ ಎಂಬ ಪ್ರಶ್ನೆಗಳೂ ಸಹ ಮೂಡ ತೊಡಗಿವೆ.ಮುಖ್ಯಮಂತ್ರಿಗಳ ಪ್ರವಾಸದ ವೇಳೆ ಅಡ್ವಾನ್ಸ್ ಲೈಪ್ ಸಪೋರ್ಟ್ ಆಂಬುಲೆನ್ಸ್ ,ತಜ್ಞ ವೈದ್ಯರ ನೇಮಿಸಿರಲಿಲ್ಲ ಎಂದು ಗೊತ್ತಾಗಿದೆ.ಸರ್ಕಾರದ ನಿರ್ದೇಶನವಿದ್ದರೂ ಗಡಾದ ಜೀವರಕ್ಷಕ ಉಪಕರಣವಿರುವ ವಾಹನ ನೇಮಿಸದೇ ಸಾಮಾನ್ಯ ಆಂಬ್ಯುಲೆನ್ಸ್ ನೇಮಕ ಮಾಡಿದ್ದರು ಎಂದು ತಿಳಿದು ಬಂದಿದೆ.ವೈದ್ಯಕೀಯ ತಂಡದೊಂದಿಗೆ ನಿರಂತರ ಸಂಪರ್ಕ ಸಾಧಿಸದೇ ಇರುವುದು,ಸಿಎಂ ವಾಸ್ತವ್ಯ ಇದ್ದ ಸ್ಥಳದಲ್ಲಿ ತಜ್ಞ ವೈದ್ಯರ ಬದಲು ಪಿಜಿ ವೈದ್ಯರ ನೇಮಕ ಮಾಡಿರುವುದು,ಸಿಎಂ ಪ್ರವಾಸದ ವೇಳೆ ಜಿಲ್ಲಾಡಳಿತದ ಜತೆ ಸಂಪರ್ಕ ಸಾಧಿಸದೇ ಕರ್ತವ್ಯ ಲೋಪ ಎಸಗಿರುವುದು
ಪರಿಶೀಲನೆ ವೇಳೆ ಕನಿಷ್ಠ ಸೌಲಭ್ಯ ಒದಗಿಸದೇ ಇರುವುದು ಬೆಳಕಿಗೆ ಬಂದಿದೆ.ಸಿಎಂ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದ್ದು 7 ದಿನದೊಳಗೆ ಸಮರ್ಪಕ ಉತ್ತರ ನೀಡದೇ ಇದ್ರೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ನೋಟಿಸ್ ಜಾರಿ ಮಾಡಲಾಗಿದೆ.ಜುಲೈ 9ರಂದು ವಿಭಾಗಮಟ್ಟದ ಪ್ರಗತಿ ಪರಿಶೀಲನೆ ಸಭೆಗೆ ಸಿಎಂ ಡಿಕೆಶಿ ಆಗಮಿಸಿದ್ದರು.













