Uncategorized

ರಾಯರೇ ಆ ಹುಡುಗಿಯಿಂದ ನನ್ನ ಕಾಪಾಡಿ! ರಾಯರ ಹುಂಡಿಯಲ್ಲಿ ಭಕ್ತನ ಪತ್ರ ಪತ್ತೆ!

ಬೆಳಗಾವಿ:
ಹುಡುಗಿ ಕಾಟದಿಂದ ತಪ್ಪಿಸಿಕೊಳ್ಳಲು ಹುಡುಗನೊಬ್ಬ ರಾಯರಿಗೆ ಮೊರೆ ಇಟ್ಟಿದ್ದಾನೆ.ಹೌದು ಇಂತಹ ವಿಚಿತ್ರ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಸುವ ವೇಳೆ ದೇವಸ್ಥಾನದ ಕಮೀಟಿಯವರಿಗೆ ಪತ್ರ ಒಂದು ಸಿಕ್ಕಿದ್ದು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.ಇತ್ತೀಚೆಗೆ ರಾಘವೇಂದ್ರ ಮಠದಲ್ಲಿ ಹುಂಡಿ ಎಣಿಕೆ ಮಾಡುವಾಗ ವಿಚಿತ್ರ ಹರಕೆ ಪತ್ರ ಪತ್ತೆಯಾಗಿದ್ದು  ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು ಅಂತಾ ಭಕ್ತನಿಂದ ಪತ್ರ ಬರೆಯಲಾಗಿದೆ. ಮತ್ತದನ್ನು  ಹುಂಡಿಯಲ್ಲಿ ಹಾಕಲಾಗಿದೆ.
ಪತ್ರದಲ್ಲಿ ಏನಿದೆ..?ಎನ್ನುವುದನ್ನು ನೋಡುವುದಾದರೆ
ಪತ್ರದಲ್ಲಿ ಶ್ರೀ ಗಣಪತಿಯೇ ನಮಃ.
ಓಂ ಶ್ರೀ ರಾಘವೇಂದ್ರಾಯ ನಮಃ.
ರಾಯರೇ ನಮ್ಮನ್ನು ಆ ವಿಷದಿಂದ ಕಾಪಾಡು.
ರಾಯರೇ ಆ ಹುಡುಗಿಯಿಂದ ನಮ್ಮನ್ನು ಕಾಪಾಡು.
ರಾಯರೇ ಈ ಕಷ್ಟದಿಂದ ನಮ್ಮನ್ನು ಕಾಪಾಡು.
ರಾಯರಿದ್ದಾರೆ ನಮ್ಮ ಜೊತೆ‌, ಹೀಗಾಗಿ ಅವರಲ್ಲಿ ನನ್ನ ಕಷ್ಟವನ್ನು ಕೇಳಿಕೊಳ್ಳುತ್ತಿದ್ದೇನೆ.ಗುರುಗಳೇ ಆದಿಶಕ್ತಿ ದೇವಿ, ತಂದೆ, ತಾಯಿ ಕಾಪಾಡು.ಧನ್ಯವಾದಗಳು ಅಂತಾ ಪತ್ರದಲ್ಲಿ ಬರೆಯಲಾಗಿದೆ.
ಪತ್ರ ಬರೆದಿರುವ ವ್ಯಕ್ತಿಯ ಹೆಸರು, ವಿಳಾಸ ಸೇರಿ ಯಾವುದೇ ಮಾಹಿತಿ ಉಲ್ಲೇಖವಾಗಿಲ್ಲ.ಅನಾಮಧೇಯ ಭಕ್ತನ ಈ ಅಪರೂಪದ ಮನವಿ ಪತ್ರ ಮಠದ ಸಿಬ್ಬಂದಿ, ಭಕ್ತರನ್ನು ಚಕಿತಗೊಳಿಸಿದೆ.ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ

TV24 News Desk
the authorTV24 News Desk

Leave a Reply

error: Content is protected !!