ಬೆಳಗಾವಿ:
ರಾಜ್ಯ ಸರ್ಕಾರದ ಸಿವಿಲ್ ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆಗಳು ಇಂದು ನಡೆಯುತ್ತಿರುವ ಹಿನ್ನೆಲೆಯಲ್ಲಿ
ಪೊಲೀಸರ ಬಿಗಿ ಭದ್ರತಯಲ್ಲಿ ಪ್ರಶ್ನೆ ಪತ್ರಿಕೆ ರವಾನೆ ಮಾಡಲಾಯಿತು.ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ನೇತೃತ್ವದಲ್ಲಿ ಪ್ರಶ್ನೆ ಪತ್ರಿಕೆ ರವಾನೆ ಮಾಡಲಾಗಿದ್ದು
ಬೆಳಗಾವಿ ನಗರದ ವಿಶ್ವೇಶ್ವರಯ್ಯ ನಗರದಲ್ಲಿರುವ ಜಿಲ್ಲಾ ಖಜಾನೆ ಕಾರ್ಯಾಲಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಇರಿಸಲಾಗಿತ್ತು.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 61ಪರೀಕ್ಷಾ ಕೇಂದ್ರಗಳಿದ್ದು , 25 ಸಾವಿರದ 164ಜನ ಅಭ್ಯರ್ಥಿಗಳು ಇಂದು ಪರೀಕ್ಷೆ ಎದುರಿಸಲಿದ್ದಾರೆ.ಇದಕ್ಕಾಗಿ 15ಕ್ಕೂ ವಾಹನಗಳ ಬಳಕೆ ಮಾಡಿದ್ದು ಪರೀಕ್ಷಾ ಕೇಂದ್ರದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಮ ಮಾಡಲಾಗುತ್ತದೆ ಮಾಡಲಾಗಿದೆ.ಹೊರಗಡೆ ತಪಾಸಣೆ ಯಂತ್ರಗಳು,ಫೇಸ್ ರಿಕಗ್ನೇಶನ್ ಮಷೀನ
ಡ್ರೆಸ್ ಕೋಡ್ ಆಫೀಸರಗಳನ್ನು ನೇಮಕ ಮಾಡಲಾಗಿದೆ.ಜಿಲ್ಲಾ ಖಜಾನೆಯಿಂದ ಪೇಪರ್ ರವಾನಿಸಲಾಗಿದ್ದು ಪೊಲೀಸ್ ಭದ್ರತೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಜಿಲ್ಲಾಡಳಿತ ರವಾನೆ ಮಾಡಿದೆ.ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ನೇತೃತ್ವದಲ್ಲಿ ಖಜಾನೆ ಕೀ ಓಪನ್ ಮಾಡಲಾಗಿದ್ದು ಅಭ್ಯರ್ಥಿಗಳು ಧೈರ್ಯದಿಂದ ಪರೀಕ್ಷೆ ಎದುರಿಸುವಂತೆ ಜಿಲ್ಲಾಧಿಕಾರಿಗಳು ಕರೆ ನೀಡಿದ್ದಾರೆ.












