Uncategorized

ಚಿಕ್ಕೋಡಿಯಲ್ಲಿ ಬಸ್ ಟೈಯರ್ ಸ್ಪೋಟ ತಪ್ಪಿದ ಭಾರಿ ಅನಾಹುತ! 35 ಪ್ರಯಾಣಿಕರು ಸೇಫ್!

ಬೆಳಗಾವಿ:

ಚಿಕ್ಕೋಡಿ ಪಟ್ಟಣದಿಂದ ಜನವಾಡ ಗ್ರಾಮದತ್ತ ತೆರಳುತ್ತಿದ್ದ ಸರ್ಕಾರಿ ಬಸ್ ಟೈಯರ್ ಸ್ಪೋಟಗೊಂಡು ಡಿವೈಡರ್ ಗೆ ಗುದ್ದಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದ ಬಳಿ ನಡೆದಿದೆ. ಬಸ್ಸು ಚಿಕ್ಕೋಡಿ ಪಟ್ಟಣದಿಂದ ಜನವಾಡ ಗ್ರಾಮದತ್ತ ತೆರಳುತ್ತಿತ್ತು ಎಂದು ಮಾಹಿತಿ ಸಿಕ್ಕಿದೆ. ಬಸ್ಸಿನಲ್ಲಿ ಮಹಿಳೆಯರು ಮಕ್ಕಳು ಸೇರಿ ಒಟ್ಟು 35 ಪ್ರಯಾಣಿಕರು ಪ್ರಯಾಣ ಬೆಳೆಸುತ್ತಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಚಿಕ್ಕೋಡಿ ಪಟ್ಟಣದ ಮೆಹಬೂಬ್ ನಗರದ ಬಳಿ ಬರುತ್ತಿದ್ದಂತೆ ಬಸ್ ನ ಮುಂಭಾಗದ ಟೈಯರ್ ಸ್ಪೋಟಗೊಂಡು ಅನಾಹುತ ನಡೆದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಪ್ರಯಾಣಿಕರನ್ನು ಬೇರೆ ಬಸ್ ಮಾಡಿ ಕೊಟ್ಟು ಅವರನ್ನು ಊರು ತಲುಪಿಸುವ ಕಾರ್ಯಕ್ಕೆ ಸಿಬ್ಬಂಧಿ ಮುಂದಾಗಿದ್ದು ಬಸ್ ಸ್ಥಳದಿಂದ ತೆರವುಗೊಳಿಸಲು ಕೆಎಸ್ಆರ್ಟಿ ಸಿ ಸಿಬ್ಬಂಧಿ ಮುಂದಾಗಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!