


ಬೆಳಗಾವಿ:
ಹಿರೋ ಸ್ಪ್ಲೆಂಡರ್ ಬೈಕ್ ಕದಿಯುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.ಬೈಕ್ ಕಳ್ಳನಿಂದ 43 ಬೈಕುಗಳನ್ನು ಕಿತ್ತೂರು ಪೋಲಿಸರು ವಶಕ್ಕೆ ಪಡೆದಿದ್ದಾರೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪೋಲಿಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು
ಮಾಸ್ಟರ್ ಕೀ ಬಳಸಿ ಬೈಕುಗಳನ್ನು ಖದೀಮ ಕದಿಯುತ್ತಿದ್ದ ಎನ್ನಲಾಗಿದೆ.
ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮನನ್ನು ನಾರಾಯಣ ಮನೋಹರ್ ಕದಮ್ ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿಯನ್ನು ಖಾನಾಪೂರ ತಾಲೂಕಿನ ನಿಡಗಲ್ ನಿವಾಸಿ ನಾರಾಯಣ ಕದಮ್ ಎಂದು ಗುರುತಿಸಲಾಗಿದ್ದು ಬೆಳಗಾವಿ, ಗದಗ,ಹುಬ್ಬಳ್ಳಿ,ಧಾರವಾಡ,ಉತ್ತರ ಕನ್ನಡ ಸೇರಿದಂತೆ ಹಲವು ಕಡೆ ಖದೀಮ ಬೈಕುಗಳನ್ನು ಕದ್ದಿದ್ದ ಕದ್ದು ನಂತರ ಕದ್ದ ಬೈಕುಗಳನ್ನು ಕಡಿಮೆ ಬೆಲೆಗೆ ಹಳ್ಳಿಗಳಲ್ಲಿ ರೈತರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಕಿತ್ತೂರು ಒಂದೇ ಠಾಣೆಯಲ್ಲಿ ಈ ಕುರತು ಹಲವು ಪ್ರಕರಣಗಳು ದಾಖಲಾಗಿದ್ದು ಸದ್ಯ ಕಿತ್ತೂರು ಪೋಲಿಸರಿ ಪ್ರಕರಣಗಳನ್ನು ಭೇದಿಸಿದ್ದಾರೆ ಎಂದು ಬೆಳಗಾವಿ ಎಸ್ಪಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.










