Uncategorized

ಹಂ ಇನ್ನೇನ್ರಿ ರಾಜಕೀಯ ಲೆಕ್ಕಾಚಾರ!

ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಎಲ್ಲ ಜಿಲ್ಲೆಗಳದ್ದೇ ಒಂದು ತೂಕವಾದ್ರೆ ಬೆಳಗಾವಿಯದ್ದೇ ಒಂದು ತೂಕ ಎನ್ನುವುದು ಹಳೆ ಡೈಲಾಗ್‌. ಆ ಡೈಲಾಗ್ ಹುಟ್ಟೋಕೆ ಕಾರಣ ಇಲ್ಲಿನ ರಾಜಕೀಯ, ಹಾಗೂ ರಾಜಕಾರಣದ ತಿರುವುಗಳು. ಡಿಕೆ ಶಿವಕುಮಾರ್ ಅವರ ಸಂಪುಟಕ್ಕೆ ಇಂದು ಸರ್ಜರಿ ಆಗಿದೆ. ಹಲವು ಹೊಸ ಮುಖಗಳೂ ಸೇರಿದಂತೆ ಪಕ್ಷದಿಂದ ಪಕ್ಷಕ್ಕೆ ಬಂದವರಿಗೂ ಸಚಿವ ಸ್ಥಾನ‌ ಸಿಕ್ಕಿದೆ.‌

ನಿರೀಕ್ಷೆಯಂತೆ ಹಿರಿಯ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರಿಗೆ ಕಾಂಗ್ರೇಸ್ ಹೈಕಮಾಂಡ್ ಮಣೆಹಾಕಿದೆ. ಪಕ್ಷ ಸೇರುವಾಗಲೇ ಸಚಿವ ಸ್ಥಾನವನ್ನು ನೀಡುವ ಭರವಸೆಯನ್ನು ಪಕ್ಷ  ಅವರಿಗೆ ನೀಡಿತ್ತು ಎನ್ನುವುದು ಹಳೆಯ ವಿಚಾರ. ಸದ್ಯ ಬೆಳಗಾವಿಯಿಂದ ಸವದಿ ಸಚಿವಸ್ಥಾನ ಪಡೆದುಕೊಳ್ಳುವುದರ ಮೂಲಕ ಇಬ್ಬರು ಪ್ರಭಾವಿ ಹಿರಿಯ ನಾಯಕರಿಗೆ ಕಾಂಗ್ರೇಸ್ ಸಚಿವ ಸ್ಥಾನ ನೀಡಿದಂತಾಗಿದೆ.

ಒಂದು ಕಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಚಿವ ಸ್ಥಾನ ಫಿಕ್ಸ್ ಎನ್ನುವ ಪರಿಸ್ಥಿತಿ ಇದ್ದರೂ ಸಹ ಕಾಂಗ್ರೇಸ್ ಹೈಕಮಾಂಡ್ ಹಾಗೂ ಡಿಕೆ ಶಿವಕುಮಾರ್ ಅವರನ್ನು ಹಿಂದೆ ಇಟ್ಟಿದ್ದಾರೆ.ಅದ್ಯಾಕೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಹಿಂದಿಟ್ಟರು ಅಥವಾ ಸಚಿವ ಸ್ಥಾನಕ್ಕೆ ಕನ್ಸಿಡರ್ ಮಾಡಲಿಲ್ಲ ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ.ಆದರೆ  2023 ರ ಚುನಾವಣೆಯಲ್ಲಿ ಬೇಷರತ್ತಾಗಿ ಪಕ್ಷ ಸೇರಿದ್ದ ಸವದಿಯವರನ್ನು ಪಕ್ಷ ಮಂತ್ರಿಯನ್ನಾಗಿಸಿದೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರು ಹಿರಿಯರು ಮಂತ್ರಿಸ್ಥಾನವನ್ನು ಅಲಂಕರಿಸಿದ್ದಾರೆ. ಸವದಿಯರಿಗೆ ಪಕ್ಷ ಮಣೆ ಹಾಕುತ್ತೋ ಇಲ್ಲವೋ ಎನ್ನುವುದು ಮೊದಲು ಸಚಿವ ಸತೀಶ್ ಜಾರಕಿಹೊಳಿಯವರಿಗೂ ತಿಳಿದಿರಲಿಲ್ಲ ಎನಿಸುತ್ತದೆ. ಹೀಗಾಗಿ ಅವರು ಜಿಲ್ಲೆಯ ಮತ್ತೋರ್ವ ಹಿರಿಯ ಶಾಸಕ ಅಶೋಕ್ ಪಟ್ಟಣ್ ಹಾಗೂ ಮಹಾಂತೇಶ್ ಕೌಜಲಗಿ ಪರವಾಗಿ ಹೈಕಮಾಂಡ್ ಮುಂದೆ ಬ್ಯಾಟ್ ಬೀಸಿದ್ದರು. ಆದರೆ ಪಕ್ಷ ಸವದಿಯರನ್ನು ಮಂತ್ರಿಯನ್ನಾಗಿಸಿದೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ನ ಮಹೇಶ್ ಕುಮಟಳ್ಳಿ ವಿರುದ್ಧ ಸೋತಿದ್ದರು. ಸೋತಿದ್ದು‌ ಮಹೇಶ್ ಕುಮಟಳ್ಳಿ ವಿರುದ್ಧವಾಗಿದ್ದರೂ ಸಹ ಸೋಲಿಸಿದ್ದು ಗೋಕಾಕನ ಶಾಸಕ ರಮೇಶ್ ಜಾರಕಿಹೊಳಿ ಎನ್ನುವುದು ಕುತೂಹಲದ ಸಂಗತಿಯಾಗಿತ್ತು. ಅಲ್ಲಿಂದ ರಮೇಶ್ ಜಾರಕಿಹೊಳಿ ಅಥಣಿಯ ಮೇಲಿನ ಹಿಡಿತಕ್ಕೋಸ್ಕರ ಅಥಣಿಗೆ ಆಗಾಗಾ ಭೇಟಿ ನೀಡಿ ಪಕ್ಷ ಸಂಘಟನೆ ಮಾಡುತ್ತಲೇ ಬಂದಿದ್ದರು.ಇದಾದ ಬಳಿಕ ಸೋತರೂ ಸಹ ಸವದಿಯವರನ್ನು ಪಕ್ಷ ಎಂಎಲ್ಸಿ ಮಾಡಿ ಡಿಸಿಎಂ ಕೂಡ ಮಾಡಿತ್ತು.  ಆದರೆ 2023 ರ ಚುನಾವಣೆಯಲ್ಲಿ ಟಿಕೇಟ್ ವಿಚಾರವಾಗಿ ನಡೆದ ಸಂಘರ್ಷದಲ್ಲಿ ಬಿಜೆಪಿಯಿಂದ ಮಹೇಶ್ ಕುಮಟಳ್ಳಿ ಸ್ಪರ್ಧಿಸಿದರೆ ಕಾಂಗ್ರೇಸ್ ನಿಂದ ಸವದಿ ಸ್ಪರ್ಧೆ ಮಾಡಿ ಗೆದ್ದು ಬೀಗಿದ್ದರು. ಇನ್ನು ಸವದಿ ಕಾಂಗ್ರೇಸ್ ಗೆ ಬಂದ ನಂತರವೂ ಸಹ ವಿರೋಧ ಪಕ್ಷದಲ್ಲಿರುವ ರಮೇಶ್ ಜಾರಕಿಹೊಳಿ ಆಗಾಗ ಭೇಟಿ ನೀಡಿ ಸವದಿ ವಿರುದ್ಧ ಹರಿಹಾಯುವುದು ಸಾಮಾನ್ಯ ಸಂಗತಿಯೇ ಆಗಿತ್ತು. ಆದರೆ ಸವದಿ ಕಾಂಗ್ರೇಸ್ ಸೇದಿದ ಬಳಿಕವೂ ಸಹ ಸತೀಶ್ ಜಾರಕಿಹೊಳಿ ಅಥಣಿ ಕ್ಷೇತ್ರದಲ್ಲಿ ಓಡಾಡ ನಡೆಸಿದ್ದರು. ಮತ್ತು ಮಗಳ ಲೋಕಸಭಾ ಕ್ಷೇತ್ರವಾಗಿರುವುದರಿಂದ  ಅದು ಅವರಿಗೆ  ಅನಿವಾರ್ಯವೂ ಹೌದು. ರಾಜಕಾರಣ ನಿಂತ ನೀರಲ್ಲ, ಅದು ಹರಿಯುವ ನೀರು, ಇಂದು ಶತ್ರು ನಾಳೆ ಮಿತ್ರ ಎನ್ನುವ ಕಾಲಘಟ್ಟದಲ್ಲಿ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿರುವ ಸವದಿಗೆ ಈಗ ಮಂತ್ರಿಗಿರಿ ಸಿಕ್ಕಿದೆ. ಸಿದ್ದರಾಮಯ್ಯನವರ ಹಿಂದೆ ಬಂದು ಪಕ್ಷ ಸೇರಿದ್ದ  ಸತೀಶ ಜಾರಕಿಹೊಳಿಯವರಿಗೂ ಸಚಿವ ಸ್ಥಾನ ಸಿಕ್ಕಿದೆ.‌ಸವದಿಯರಿಗೆ ಯಾವ ಜಿಲ್ಲೆಯ ಉಸ್ತುವಾರಿ ಹಾಗೂ ಯಾವ ಖಾತೆ ಸಿಗಲಿದೆ ಎಂದು  ಇನ್ನೇನು ತಿಳಿದು ಬರಲಿದೆ. ಜಿಲ್ಲೆಯ ಮೇಲಿನ ರಾಜಕೀಯ ಹಿಡಿತ ಒಂದು ಕಡೆ ಈಗ ಧ್ರುವೀಕರಣದ ಹಂತ ತಲುಪಿದ್ದು ಸಚಿವದ್ವಯರ ಆಡಳಿತ ಹೇಗಿರಲಿದೆ ಎಂದು ಜಿಲ್ಲೆಯ ಜನ ಕಾದು ನೋಡುವ ತವಕದಲ್ಲಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!