ಬೆಳಗಾವಿ:
ಬೆಳಗಾವಿಯಲ್ಲಿ ಕಾರು ಹರಿದು ಒಂದಲ್ಲ ಎರಡಲ್ಲ ಬರೊಬ್ಬರಿ 48 ಕುರಿಗಳು ಸಾವನ್ನಪ್ಪಿ ,15ಕ್ಕೂ ಹೆಚ್ಚು ಕುರಿಗಳು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಜಾಲಿಕ್ಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದ್ದು ನಿನ್ನೆ ತಡರಾತ್ರಿ ಕಾರೊಂದು ಏಕಾಏಕಿ ಕುರಿಗಳ ಮೇಲೆ ಹರಿದ ಪರಿಣಾಮ ಕುರಿಗಳು ಧಾರುಣವಾಗಿ ಸಾವನ್ನಪ್ಪಿವೆ.
ಕಾರು ಬೈಲಹೊಂಗಲದಿಂದ ಬೆಳವಡಿ ಕಡೆ ಹೊರಟಿತ್ತು ಎನ್ನಲಾಗಿದೆ.ಜಾಲಿಕೊಪ್ಪ ಗ್ರಾಮದ ಬಳಿ ರಸ್ತೆ ಮೇಲೆ ಕುರಿಗಳು ಬರುತ್ತಿದ್ದ ವೇಳೆ ಅತೀ ವೇಗದಲ್ಲಿ ಬಂದು ನೇರವಾಗಿ ಕುರಿಗಳ ಮೇಲೆ ಕಾರು ಚಾಲಕ ಕಾರು ಹರಿಸಿದ್ದಾನೆ.ಮೃತಪಟ್ಟಿರುವ ಕುರಿಗಳು ಕೆಂಗಾನೂರ ಗ್ರಾಮದ ಚಂದ್ರಪ್ಪ ಹಿತ್ತಲಮನಿ ಹಾಗೂ ದೊಡವಾಡ ಗ್ರಾಮದ ಬೀರಪ್ಪ ಅವರಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು ಸ್ಥಳದಲ್ಲೆ 48 ಕುರಿಗಳು ಸಾವನ್ನಪ್ಪಿದ್ದರೆ 15 ಕ್ಕೂ ಹೆಚ್ಚು ಕುರಿಗಳು ಗಂಭೀರ ಗಾಯಗೊಂಡಿವೆ.ಗರ್ಭಿಣಿ ಕುರಿಗಳ ಹೊಟ್ಟೆ ಸೀಳಿ ಮರಿಗಳು ಹೊರ ಬಿದ್ದಿದ್ದನ್ನು ಕಂಡು ಸ್ಥಳೀಯರು ಕಣ್ಣಿರಿಟ್ಟಿದ್ದಾರೆ.ರಸ್ತೆ ಮೇಲೆ ಸತ್ತ ಬಿದ್ದ ಹಾಗೂ ಗಂಭೀರ ಗಾಯಗೊಂಡ ಕುರಿಗಳ ನರಳಾಟ ನೋಡಿ ಸಾರ್ವಜನಿಕರ ಆಕ್ರೋಶ ಹೊರಹಾಕಿದ್ದಾರೆ.ಕುರಿಗಳ ಸಾವಿನಿಂದ ಅಪಾರ ನಷ್ಟ ಹಿನ್ನಲೆ ಕಾರು ಚಾಲಕನ ವಿರುದ್ದ ಮಾಲೀಕರೂ ಆಕ್ರೋಶ ಹೊರಹಾಕಿದ್ದು ಕುರಿಗಳ ಮೇಲೆ ಕಾರು ಹರಿಸಿ ಕಾರು ಹರಿಸಿ ಕಾರು ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇನ್ನು ಘಟನಾ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆದಿದ್ದು ಬೈಲಹೊಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.











