

ಧಾರವಾಡ:
ಸಿಎಂ ನಡೆಯಿಂದ ಬೇಸರಗೊಂಡು ಸ್ವಯಂ ನಿವೃತ್ತಿಗೆ ಮುಂದಾಗಿದ್ದ ಎಎಸ್ಪಿ ನಾರಾಯಣ ಬರಮನಿ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಸ್ವಯಂ ನಿವೃತ್ತಿಗೆ ನಾರಾಯಣ ಬರಮನಿ ಮನವಿ ಮಾಡಿಕೊಂಡಿದ್ದರು ಇಂದು ಧಾರವಾಡದ ಸಾಧನಕೇರಿಯ ತಮ್ಮ ನಿವಾಸದ ಮುಂದೆ ಮಾಧ್ಯಮಗಳು ಅವರನ್ನು ಮಾತನಾಡಿಸಿದ ವೇಳೆ ನಾನು ಶಸ್ತಿನ ಇಲಾಖೆಯಲ್ಲಿದಿನಿ, ನನ್ನ ಭಾವನೆಗಳನ್ನು ನನ್ನ ಮೇಲಧಿಕಾರಿಗಳಿಗೆ ತಿಳಿಸಿದ್ದೆನೆ. ಈ ಕುರಿತು ಮೇಲಧಿಕಾರಿಗಳು ಹಾಗೂ ಸಿಎಂ ಗೃಹ ಸಚಿವರು ಮಾತನಾಡುತ್ತಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿರುವೆ ಎಂದಿದ್ದಾರೆ.ಇನ್ನು ರಾಜೀನಾಮೆ ಅಂಗೀಕಾರದ ವಿಚಾರದ ಕುರಿತು ಪ್ರಶ್ನೆ ಮಾಡಿದ ಮಾಧ್ಯಮಗಳಿಗೆ ಅದನ್ನು ಸರ್ಕಾರ ನಿರ್ಣಯ ಮಾಡುತ್ತದೆ ನಾನೀಗ ದೈನಂದಿನ ಕೆಲಸಕ್ಕೆ ಹಾಜರಾಗುವೆ ಎಂದು ಹೇಳಿಕೆ ನೀಡಿದ್ದಾರೆ. ಮನೆಯಿಂದ ಇಂದು ಧಾರವಾಡದಲ್ಲಿರುವ ತಮ್ಮ ಕಚೇರಿಗೆ ತೆರಳಿ ಎಂದಿನಂತೆ ಧಾರವಾಡ ಎಎಸ್ಪಿ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದಾರೆ.