ಜಿಲ್ಲೆಬೆಳಗಾವಿ

ನದಿ ಇಂಗಳಗಾಂವ್ ಗ್ರಾಮದಲ್ಲಿ ಉಲ್ಟಾ ಹಾರಾಡಿದ ಧ್ವಜ! 

ಬೆಳಗಾವಿ: ಅಥಣಿ ತಾಲೂಕಿನ ನದಿ ಇಂಗಳಗಾಂವಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆದ ಧ್ವಜಾರೋಹಣ ವೇಳೆ ಭಾರತದ ಬಾವುಟ ಉಲ್ಟಾ ಹಾರಾಡಿದೆ.ಸಾಮಾನ್ಯವಾಗಿ ಧ್ವಜಾರೋಹಣದ ವೇಳೆ ಅಥವಾ ಅದಕ್ಕಿಂತ ಮುಂಚೆ ಧ್ವಜವನ್ನು ಕಟ್ಟಲು ಹಲವು ನಿಯಮಗಳಿವೆ ಆ ನಿಮಯದ ಪ್ರಕಾರ ಧ್ವಜವನ್ನು ಕಟ್ಟಿಲ್ಲ ಎನ್ನುವುದು ಉಲ್ಟಾ ಧ್ವಜ ಹಾರಾಡುವುದಕ್ಕೆ ಕಾರಣ ಎನ್ನಲಾಗಿದೆ. ಧ್ವಜಾರೋಹಣನವನ್ನು
ಗ್ರಾಮ ಪಂಚಾಯತಿ ಅಧ್ಯಕ್ಷೆ ಸಂಗೀತಾ ಚನಗೌಡರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ್ದಾರೆ. ಈ ವೇಳೆ ಧ್ವಜದ ಹಸಿರು ಬಣ್ಣ ಮೇಲೆ ಹಾರಾಡಿದೆ. ಸಧ್ಯ ಧ್ವಜಾರೋಹಣದ ಫೋಟೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.

TV24 News Desk
the authorTV24 News Desk

Leave a Reply