ಕ್ರೈಂಬೆಳಗಾವಿ

ಅಥಣಿಯಲ್ಲಿ ಹಿಟ್ ಆಂಡ್ ರನ್ ಗೆ 10 ವರ್ಷದ ಬಾಲಕ ಬಲಿ!

ಬೆಳಗಾವಿ:
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಜಮಖಂಡಿ ರಸ್ತೆ ಮಾರ್ಗದಲ್ಲಿ  ರಸ್ತೆ ಅಪಘಾತ ನಡೆದಿದೆ. ಅಪಘಾತದಲ್ಲಿ ಅಗಸ್ತ್ಯ ಕನಮಡಿ (10) ವರ್ಷದ ಬಾಲಕ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ನಡೆದಿದೆ. ಸ್ಥಳೀಯರು ಹೇಳುವ  ಪ್ರಕಾರ, ರಸ್ತೆ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಕಾರು ಹಾದು ಹೋಗಿದ್ದು, ಬಾಲಕನಿಗೆ ತೀವ್ರ ಗಾಯಗಳಾಗಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಅಪಘಾತದ ನಂತರ ಕಾರು ಚಾಲಕ ತಕ್ಷಣವೇ ತಾನು ಮಾಡಿದ ಅಪರಾಧವನ್ನು ಲೆಕ್ಕಿಸದೇ, ಕನಿಕರವಿಲ್ಲದೆ ತಿರುಗಿ ನೋಡದೇ ಪರಾರಿಯಾಗಿದ್ದಾನೆ. ಈ ಘಟನೆಯು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ

ಸ್ಥಳಕ್ಕೆ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಸಂಬಂಧ ತನಿಖೆ ಆರಂಭಿಸಲಾಗಿದೆ. ಬಾಲಕನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಕಾರು ಚಾಲಕನ ಪತ್ತೆಗಾಗಿ ಪೋಲೀಸರು ಸಿಸಿಟಿವಿ ಫೂಟೇಜ್ ವೀಕ್ಷಿಸುತ್ತಿದ್ದಾರೆ.

ಈ ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಅಥಣಿ ಪೊಲೀಸರು ನಾಪತ್ತೆಯಾದ ಕಾರು ಮತ್ತು ಚಾಲಕನ ತನಿಖೆಗೆ ತೀವ್ರ ಶೋಧ ಆರಂಭಿಸಿದ್ದಾರೆ.

TV24 News Desk
the authorTV24 News Desk

Leave a Reply