ಕ್ರೈಂಜಿಲ್ಲೆಬೆಳಗಾವಿ

ಗೋಕಾಕದಲ್ಲಿ ಮನೆ ಗೋಡೆ ಕುಸಿದು ತಾಯಿ ಮಗನಿಗೆ ಗಂಭೀರ ಗಾಯ

ಬೆಳಗಾವಿ;

ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಮುಂದುವರೆದಿವೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಸಂಗಮ ನಗರದಲ್ಲಿ ಮನೆ ಕುಸಿದು ಬಿದ್ದು ತಾಯಿ ಮಗ ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ. ಸಂಗಮನಗರಲ್ಲಿರುವ ಫರೀದಾ ಎನ್ನುವವರ ಮನೆ ಕುಸಿದು ಘಟನೆಯಲ್ಲಿ ತಾಯಿ ಫರೀದಾ ಹಾಗೂ ಅವರ ಮಗ ರಿಯಾಜ್ ಗಾಯಗೊಂಡಿದ್ದಾರೆ.ನಿರಂತರ ಮಳೆಗೆ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿದ್ದು‌ ಮನೆಯ ಗೋಡೆ ಕುಸಿಯುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಸ್ಥಳೀಯರು ತಾಯಿ ಫರೀದಾ ಹಾಗೂ ಮಗ ರಿಯಾಜ್ ನನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೂಡಲೇ ಅವರುನ್ನು ಗೋಕಾಕದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇಬ್ಬರೂ ಸಹ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ. ಘಟನೆಯು ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

TV24 News Desk
the authorTV24 News Desk

Leave a Reply