ಬೆಳಗಾವಿ:
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹೊಡೆದ ವಿಚಾರಕ್ಕೆ ಸಂಬಂಧಪಟ್ಟಂತೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಗಿಡಕ್ಕೆ ಕಟ್ಟಿ ಹಾಕಿದ್ಯಾಕೆ ಎಂದು ಹಲ್ಲೆ ಮಾಡಿದ ಆರೋಪಿಯ ಸ್ಥಾನದಲ್ಲಿರುವ ಇಮಾಂಬು ಮುಲ್ತಾನಿ ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ.ಅಲ್ಲದೆ ನಮ್ಮ ಬಳಿ ಶ್ರೀರಾಮಸೇನೆ ಕಾರ್ಯಕರ್ತರು ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಇಮಾಂಬು ಆರೋಪಿಸಿದ್ದಾರೆ.ವಾಹನವನ್ನು ಬೆನ್ನಟ್ಟಿ ಮನೆಯವರೆಗೂ ಅಂದುಶ ಶ್ರೀರಾಮಸೇನೆ ಕಾರ್ಯಕರ್ತರು ಬಂದಿದ್ದರು ನನ್ನ ಮಗನ ಮೇಲೆ ಏಕಾಎಕಿ ಹಲ್ಲೆಗೆ ಮುಂದಾದ್ರು
ಪ್ರಶ್ನೆ ಮಾಡಲು ಹೋದ ನನ್ನ ಮೇಲೆ ಹಲ್ಲೆ ಮಾಡಿದರು
ಅದನ್ನು ಪ್ರಶ್ನೆ ಮಾಡಲು ಬಂದ ನನ್ನ ಸೊಸೆಯ ಬಟ್ಟೆ ಹರಿದರು
ಹಲ್ಲೆ ಮಾಡಿ ಓಡಿ ಹೋಗಲೆತ್ನಿಸಿದವರನ್ನು ನಮ್ಮ ಜನ ಕಟ್ಟಿಹಾಕಿದರು.ಕಟ್ಟಿ ಹಾಕಿ ಹೊಡೆದಿದ್ದು ನಿಜ ಎಂದು ಇಮಾಂಬು ಒಪ್ಪಿಕೊಂಡಿದ್ದಾರೆ. ಈ ಕುರಿತು ಹುಕ್ಕೇರಿಯ ಇಂಗಳಿಯಲ್ಲಿ
ಮಾಧ್ಯಮಗಳ ಮುಂದೆ ಇಮಾಂಬು ಮುಲ್ತಾನಿ ಹೇಳಿಕೆ ನೀಡಿದ್ದಾರೆ.

