Uncategorized

ಬಾಬಾಜಾನ್ ಏ ಕ್ಯಾ ಬಾ ತುಮಾರೇ ಬರ್ತಡೇ!!

ಬೆಳಗಾವಿ: ಸಾರ್ವಜನಿಕವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಹುಟ್ಟು ಹಬ್ಬವನ್ನ ಆಚರಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ನಡೆದಿದೆ. ಕುಡಚಿ ಪಟ್ಟಣ ಪಂಚಾಯ್ತ ಸದಸ್ಯ ಬಾಬಾಜಾನ್ ಖಾಲಿಮುಂಡಾಸೈ ಎಂಬಾತ ತನ್ಮ ಬರ್ತಡೇ ದಿನ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿ ತನ್ನ‌ ಬರ್ತಡೆ ಆಚರಿಸಿಕೊಂಡಿದ್ದಾನೆ. ಇನ್ನು ಆತ ಗನ್ ಹಿಡಿದರೆ ಆತನ ಜೊತೆಯಲ್ಲಿರುವ ಯುವಕರು ಕೈಯಲ್ಲಿ ಚಾಕು ಹಿಡಿದು ನಿಂತಿದ್ದಾರೆ. ಪಕ್ಕದಲ್ಲಿಯೇ ಪೊಲೀಸ್ ಠಾಣೆ ಇದ್ದರೂ ಸಹ ಕ್ಯಾರೆ ಎನ್ನದೆ ಇಂತಹ ವರ್ತನೆಗೆ ಕುಡಚಿ ಪಟ್ಟಣದ ಜನ ಸಾಕ್ಷಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ವಿಚಿತ್ರ ಬರ್ತಡೇ ಸೆಲೆಬ್ರೇಷನ್ ವಿಡಿಯೋ ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಆಗಿವೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕುಡಚಿ ಪೊಲೀಸರು ಬಾಬಾಜಾನ್ ನನ್ನು ಬಂಧಿಸಿದ್ದು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply