ಕ್ರೀಡೆ

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಟೀಮ್ ಇಂಡಿಯಾ  

ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್‌ನಲ್ಲಿ ಅಮೋಘ ಆಟವಾಡಿದ ಇಂಗ್ಲೆಂಡ್ ತಂಡ ನವೆಂಬರ್ 13 ರಂದು ಪಾಕಿಸ್ತಾನ ತಂಡದ ವಿರುದ್ಧ ಫೈನಲ್ ಆಡಲು ಅಧಿಕೃತವಾಗಿ ಪ್ರವೇಶಿಸಿದೆ. ಟೀಂ ಇಂಡಿಯಾಗೆ ಭಾರೀ ಸೋಲು ಎದುರಾಗಿದ್ದು, ಮತ್ತೊಮ್ಮೆ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಿ 169 ರನ್ ಗುರಿ ನೀಡಿತ್ತು. ಬೃಹತ್ ಗುರಿಯೊಂದಿಗೆ ಕಣಕ್ಕಿಳಿದ ಇಂಗ್ಲೆಂಡ್ ತಂಡ ವಿಕೆಟ್ ನಷ್ಟವಿಲ್ಲದೆ ಗುರಿಯನ್ನು ಮುರಿಯಿತು. ಇಂಗ್ಲೆಂಡ್ ಆರಂಭಿಕರಾದ ಅಲೆಕ್ಸ್ ಹೇಲ್ಸ್ ಮತ್ತು ಜೋಸ್ ಬಟ್ಲರ್ ಶತಕದ ಜೊತೆಯಾಟದೊಂದಿಗೆ ಭಾರತದ ಬೌಲರ್‌ಗಳ ಮೇಲೆ ತೀವ್ರ ದಾಳಿ ನಡೆಸಿದರು.
ಭಾರತ ನೀಡಿದ್ದ 170 ರನ್‌ಗಳ ಗುರಿಯನ್ನು ಇಂಗ್ಲೆಂಡ್ ಕೇವಲ 16 ಓವರ್‌ಗಳಲ್ಲಿ ಸಾಧಿಸಿತು. ಜೋಸ್ ಬಟ್ಲರ್ 49 ಎಸೆತಗಳಲ್ಲಿ 80 ರನ್ ಮತ್ತು ಅಲೆಕ್ಸ್ ಹೇಲ್ಸ್ 47 ಎಸೆತಗಳಲ್ಲಿ 86 ರನ್ ಗಳಿಸಿದರು. ಭಾರತ ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲವಾಯಿತು. ಇದೀಗ ಭಾನುವಾರ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಪ್ರಶಸ್ತಿ ಸಮರಕ್ಕೆ ಪ್ರವೇಶಿಸಲಿದೆ.

TV24 News Desk
the authorTV24 News Desk

Leave a Reply