ಬೆಳಗಾವಿ: ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವ್ಯಾಪಕ ಮಳೆಯಾಗ್ತಿರೋ ಪರಿಣಾಮ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ಅಧಿಕಾರಿಗಳು ನೀರು ಹರಿಬಿಡಲು ನಿರ್ಧಿಸಿದ್ದಾರೆ. ಕೃಷ್ಣಾ ನದಿಗೆ 16,565 ಕ್ಯೂಸೇಕ್ ನೀರು ಹರಿಬಿಡಲು ಅಧಿಕಾರಿಗಳು ನಿರ್ಧರಿಸಿದ್ದು ಸಧ್ಯ ಮಹಾರಾಷ್ಟ್ರದ ಕೊಯ್ನಾ ಜಲಾಶಯ 81.87 ಟಿಎಂಸಿ ಭರ್ತಿಯಾಗಿದೆ.ಅದಂರೆ ಶೇಖಡಾ 77.79 ಪ್ರತಿಷತ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿಯೇ ಅತೀ ದೊಡ್ಡ ಜಲಾಶಯ ಎಂದು ಕರೆಯಲ್ಪಡುವ ಕೊಯ್ನಾ ಜಲಾಶಯದ ಸಧ್ಯ 103 ಟಿಎಂಸಿ ಭರ್ತಿಯಾಗಿದೆ. ಈ ಪರಿಣಾಮವಾಗಿ ರಾಜ್ಯದ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು ಆಲಮಟ್ಟಿ ಜಲಾಶಯದಿಂದ 80,000 ಕ್ಯೂಸೇಕ್ ನೀರು ಹೊರ ಹಾಕಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಸಧ್ಯ ಜಲಾಶಯಿಂದ 42,500 ಕ್ಯೂಸೇಕ್ ಮಾತ್ರ ನೀರು ಹೊರ ಹಾಕಲಾಗುತ್ತಿತ್ತು. ಆದರೆ ಕೊಯ್ನಾ ಜಲಾಶಯದಿಂದ ನೀರು ಹರಿಬಿಡ್ತಿರೋ ಹಿನ್ನೆಲೆ ಅಧಿಕಾರಿಗಳು ಹೆಚ್ಚಿನ ನೀರು ಹೊರ ಹಾಕಲು ನಿರ್ಧರಿಸಿದ್ದಾರೆ. ಇನ್ನು ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಜಂದ ಕೃಷ್ಣಾ ನದಿಗೆ 47,500 ಕ್ಯೂಸೇಕ್ ಬಿಡುಗಡೆ ಮಾಡಲಾಗುತ್ತಿದೆ. ಇತ್ತ ದೂಧಗಂಗಾ ನದಿಯಿಂದ ಕೃಷ್ಣಾ ನದಿಗೆ 10,912 ಕ್ಯೂಸೇಕ್ ನೀರು ಬಂದು ಸೇರಿ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಸಧ್ಯ 58,412 ಕ್ಯೂಸೇಕ್ ನೀರು ಹೊರಹೋಗುತ್ತಿದೆ. ಇನ್ನು ಕಳೆದ 24 ಗಂಟೆಯಿಂದಲೂ ಸಹ ಬಾಗಲಕೋಟೆಯ ಹಿಪ್ಪರಗಿ ಜಲಾಶಯದಿಂದಲೂ ಸಹ 50,362 ಸಾವಿರ ಕ್ಯೂಸೇಕ್ ನೀರು ಹರಿದು ಬಿಡಲಾಗುತ್ತಿದೆ. ಸಧ್ಯ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳೂ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ನದಿಗಳ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು ಇದರಿಂದ ಬೆಳಗಾವಿ, ಬಾಗಲಕೋಟೆ,ವಿಜಯಪುರ, ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೆ ನದಿ ತೀರದ ಜನರು ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.



