ಬೆಳಗಾವಿ

 ದಂಡ ಪಾವತಿಸಿ ಇಲ್ಲವಾದರೆ ನಿಮ್ಮ ವಾಹನ ಸೀಜ್..! 

 ಶೇ.50 ರಷ್ಟು ರಿಯಾಯತಿ ನೀಡಿ ಎರಡನೇ ಬಾರಿಗೆ ಮಾ.4 ರಿಂದ ಮಾ.18 ವರೆಗೆ ದಂಡ ಪಾವತಿಸಲು ಕಾಲಾವಕಾಶ
ಬೆಳಗಾವಿ: ಸಂಚಾರ ನಿಯಮ ಉಲ್ಲಂಘಿಸಿ ನಿಯಮಾನುಸಾರ ದಂಡ ಪಾವತಿಸದ ಹಿನ್ನೆಲೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಪ್ರಕರಣಗಳು ಹಾಗೂ ಕೋಟ್ಯಾಂತರ ರೂಪಾಯಿ ದಂಡದ ರೂಪದಲ್ಲಿ ಸರ್ಕಾರದ ಖಜಾನೆ ಸೇರಿಬೇಕಿದ್ದ ಹಣವನ್ನು ಪಾವತಿಸಲು ಸರ್ಕಾರ ಎರಡನೇ ಬಾರೀ ಅವಕಾಶ ನೀಡಿರುವ ಕಾಲಾವಕಾಶ ಮುಗಿಯಲು ಬ೦ದಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ದಂಡ ಪಾವತಿ ಆಗಿಲ್ಲ. ಅಲ್ಲದೇ ವಾಹನ ಸವಾರರು ಹಾಗೂ ಮಾಲೀಕರೂ ಮೊ೦ಡುತನ ಪ್ರದರ್ಶನ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾನೂನು ಪ್ರಕಾರ ವಾಹನಗಳನ್ನು ಕಂಡು ಕಂಡಲ್ಲಿ ಮುಟ್ಟುಗೋಲು ಹಾಕಿಕೊಳ್ಳುವ ಗದಾ ಪ್ರಹಾರಕ್ಕೆ ಮುಂದಾಗಿದೆ. ಇದು ಪೊಲೀಸ್ ಹಾಗೂ ಸಾರಿಗೆ ಇಲಾಖೆಗೆ ಅನಿವಾರ್ಯವಾಗಿರುವ ಮು೦ದಿನ ದಿಟ್ಟ ಕ್ರಮವಾಗಿದೆ.
ಕಳೆದ ಐದು ವರ್ಷಗಳ ಅವಧಿಯಲ್ಲಿ ಸಿಗ್ನಲ್ ಜಂಪ್, ಹೆಲೈಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್ಟ್ ಧರಿಸದಿರುವುದು, ತ್ರೀಬಲ್ ರೈಡ್, ನೋ ಪಾರ್ಕಿ೦ಗನಲ್ಲಿ ವಾಹನ ನಿಲುಗಡೆ ಹಾಗೂ ಲೈಸನ್ಸ್ ಇಲ್ಲದೆ ವಾಹನ ಚಾಲನೆ ಸೇರಿದಂತೆ ಇನ್ನೀತರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಕುರಿತು ಬೆಳಗಾವಿ ನಗರ ಪೊಲೀಸ್‌ ವ್ಯಾಪ್ತಿಯೊಂ ದರಲ್ಲೆ 6.28 ಲಕ್ಷ ಪ್ರಕರಣಗಳ ಇತ್ಯರ್ಥವಾಗದೆ 26 ಕೋಟಿ ದ೦ಡದ ರೂಪದಲ್ಲಿ ಪಾವತಿಯಾಗಬೇಕಿದ್ದ ಹಣ ಬಾಕಿ ಉಳಿದುಕೊಂಡಿದ್ದವು.  ರಾಜ್ಯಾದ್ಯಂತ ಫೆ.4 ರಿಂದ ಫೆ.11 ವರೆಗೆ ದಂಡ ಪಾವತಿಸುವ ಚಾಲಕ ಹಾಗೂ ಮಾಲೀಕರಿಗೆ ದ೦ಡದ ಮೊತ್ತದಲ್ಲಿ ಶೇ.50 ರಷ್ಟು ರಿಯಾಯಿತಿ ನೀಡುವುದಾಗಿ ಆದೇಶ ಹೊರಡಿಸಿದ್ದರು. ಈ ವೇಳೆ ಕೇವಲ ಕೆ 7612950 ದ೦ಡ ಪಾವತಿಯಾಗಿ 38691 ಪ್ರಕರಣಗಳನ್ನು ಕ್ಲೋಸ್ ಮಾಡಲಾಗಿತ್ತು. ಬೆಳಗಾವಿ ಅಷ್ಟೇ ರಾಜ್ಯದಾದ್ಯಂತ ಅತೀ ಹೆಚ್ಚು ಪ್ರಚಾರ ಪಡೆದುಕೊಂಡಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ದಂಡ ಪಾವತಿಯಾಗದೇ ಇರುವುದು ಸರ್ಕಾರದ ಅಲ್ಲದೆ ಸರ್ಕಾರ ಸದುದ್ದೇಶಕ್ಕೆ ಹಿನ್ನೆಡೆಯಗಾಗಿತ್ತು. ಈ ಹಿನ್ನೆಲೆಯಲ್ಲಿ ದಂಡ ಪಾವತಿಯಲ್ಲಿ ಶೇ.50 ರಷ್ಟು ರಿಯಾಯತಿ ನೀಡಿ ಎರಡನೇ ಬಾರಿಗೆ ಮಾ.4 ರಿಂದ ಮಾ.18 ವರೆಗೆ ಕಾಲಾವಕಾಶ ನೀಡಲಾಗಿದೆ. ಆದರೂ ಕಳೆದ ಎ೦ಟು ದಿನಗಳ ಅವಧಿಯಲ್ಲಿ 7 21 ಲಕ್ಷ ದ೦ಡ ಪಾವತಿಸಿಕೊ೦ಡು 11758 ಪ್ರಕರಣಗಳನ್ನು ಕ್ಲೋಸ್‌ ಮಾಡಲಾಗಿದೆ. ಈ ಬಾರಿ ಹೆಚ್ಚಿನ ಕಾಲಾವಕಾಶ ನೀಡಲಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ದಂಡ ಪಾವತಿಯಾಗಿಲ್ಲ, ಅದರಲ್ಲೂ ಕಾರ ಚಾಲಕರು ಹಾಗೂ ಮಾಲೀಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಗಳಿದ್ದರೂ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ದಂಡ ಪಾವತಿಸಿದ್ದಾರೆ ಎ೦ದು ತಿಳಿದು ಬಂದಿದೆ.
TV24 News Desk
the authorTV24 News Desk

Leave a Reply