ಮಹಾರಾಷ್ಟ್ರ:
ಮಹಾರಾಷ್ಟ್ರದ ಸತಾರಾ ನಗರದಲ್ಲಿ ಸಿನಿಮೀಯ ರೀತಿ ಘಟನೆಯೊಂದು ನಡೆದಿದೆ. ಪಾಗಲ್ ಪ್ರೇಮಿಯೋರ್ವ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿ ಆಕೆಯ ಹಿಂದೆ ಬಿದ್ದು ಒಂದು ವೇಳೆ ಪ್ರೀತಿಸದಿದ್ದರೆ ಆಕೆಯನ್ನು ಕೊಂದು ತಾನೂ ಸತ್ತು ಹೋಗುವುದಾಗಿ ಚಾಕು ಹಿಡಿದು ಬೆದರಿಕೆ ಹಾಕಿದ್ದಾನೆ. ಸತಾರಾ ನಗರದ ಆರ್ಯನ್ ವಾಘ್ನಾಳೆ ಎಂಬಾತ ಈ ಕೃತ್ಯ ಎಸಗಲು ಮುಂದಾಗಿದ್ದು ನಾನು ನಿನ್ನನ್ನು ಪ್ರೀತಿಸುತ್ತಿದ್ದೆನೆ, ನೀನೇಕೆ ನನ್ನನ್ನು ಪ್ರೀತಿಸುತ್ತಿಲ್ಲ ಎಂದು ಶಾಲಾ ಬಾಲಕಿಯ ಹಿಂದೆ ಬಿದ್ದಿದಿದ್ದಾನೆ. ಬಾಲಕಿ ಆತನ ಓಲೈಕೆಗೆ ಒಪ್ಪದೇ ಇದ್ದಾಗ ಬಾಲಕಿಯನ್ನು ಕೊಲೆ ಮಾಡಲು ಪಾಪಿ ಆರ್ಯನ್ ಮುಂದಾಗಿದ್ದಾನೆ ಎನ್ನಲಾಗಿದೆ.ಗಲಾಟೆಯ ವೇಳೆ ಬಾಲಕಿಯ ಕೈಗೆ ಗಾಯಗಳಾಗಿದ್ದು ಬಾಲಕಿಯನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲದೆ ಪಾಗಲ್ ಆರ್ಯನ್ ನನ್ನು ಉಪಾಯದಿಂದ ಹಿಡಿದು ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿನಂತರ ಪೊಲೀಸರಿಗೊಪ್ಪಿಸಿದ್ದಾರೆ.ಸಧ್ಯ ಪಾಗಲ್ ಪ್ರೇಮಿ ಆರ್ಯನ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಸೊಮೊಟೊ ಪ್ರಕರಣ ದಾಖಲಿಸಿಕೊಂಡಿದ್ದು ಸತಾರದ ಶಹಾಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






