ಬೆಳಗಾವಿ:
ನಿರಂತರ ಮಳೆಗೆ ಗೋಕಾಕದಲ್ಲಿ ಮನೆ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆಯಲ್ಲಿ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಗೋಕಾಕದ ಸಂಗಮನಗರದಲ್ಲಿ ಘಟನೆ ನಡೆದಿತ್ತು. ನೋಡ ನೋಡ್ತಿದ್ದಂತೆಯೇ ಮನೆಯ ಮೇಲ್ಚಾವಣಿ ಕುಸಿದು ಮನೆಯಲ್ಲಿದ್ದ ತಾಯಿ ಫರೀದಾ ಕನವಾಡೆ ಹಾಗೂ ಮಗ ರಿಯಾಜ್ ಕನವಾಡೆ ಮೇಲೆ ಬಿದ್ದಿತ್ತು. ಕೂಡಲೇ ತಾಯಿ ಮಗನನ್ನು ಹೊರ ತೆಗೆದು ಸ್ಥಳೀಯರು ಅವರನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೆ ತಾಯಿ ಫರೀದಾ ಕನವಾಡೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಘಟನಾ ಸ್ಥಳಕ್ಕೆ ಗೋಕಾಕ ಶಹರ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗೋಕಾಕ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













