ಜಿಲ್ಲೆಬೆಳಗಾವಿಬೆಳಗಾವಿ ನಗರ

ಧರ್ಮಸ್ಥಳಕ್ಕಾಗಿ ಒಂದಾದ ಹಿಂದೂ ಸಮಾಜ! ಮಠಾಧೀಶರ ನೇತೃತ್ವದಲ್ಲಿ ಪ್ರತಿಭಟನೆ!

ಬೆಳಗಾವಿ:

ಧರ್ಮಸ್ಥಳದ ವಿರುದ್ಧದ ಷಢ್ಯಂತ್ರ ಖಂಡಿಸಿ ಬೆಳಗಾವಿಯಲ್ಲಿ ಮಠಾಧೀಶರು ಹಾಗೂ ಭಕ್ತರು ಬೀದಿಗಿಳಿದು ಮೌನ ಪ್ರತಿಭಟನೆ ನಡೆಸಿದರು. ಬೆಳಗಾವಿ ನಗರದ ಸಂಭಾಜೀ ವೃತ್ತದಿಂದ ಮೌನ ಪ್ರತಿಭಟನೆ ನಡೆಸಿದ ಮಠಾಧೀಶರು ಹಾಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಒಗ್ಗಟ್ಟು ಪ್ರದರ್ಶನ ಮಾಡಿದರು. ಪ್ರತಿಭಟನೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲ ಮೂರು ಸಾವಿರ ಮಠದ ಗಂಗಾಧರ್ ಸ್ವಾಮೀಜಿ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಇನ್ನು ಶಾಸಕ ಅಭಯ್ ಪಾಟೀಲ್ ಹಾಗೂ ಶಾಸಕ ಸಂಜಯ್ ಪಾಟೀಲ್ ಮಾಜಿ ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು. ಸಂಭಾಜೀ ವೃತ್ತದಿಂದ ನಗರದ ಡಿಸಿ ಕಚೇರಿಯವರೆಗೆ ಮೌನ ಪ್ರತಿಭಟನೆ ನಡೆಸಿದ ಭಕ್ತಾಧಿಗಳು ಹಾಗೂ ಮಠಾಧೀಶರು ಧರ್ಮಸ್ಥದ ವಿರುದ್ಧ ಷಢ್ಯಂತ್ರ ರೂಪಿಸಿರುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಅಲ್ಲದೇ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

TV24 News Desk
the authorTV24 News Desk

Leave a Reply