ಕ್ರೈಂಜಿಲ್ಲೆಬೆಳಗಾವಿ ನಗರ

ಕೆಲಸದಿಂದ ವಜಾ ಮಾಡಿದ ಆರೋಪ ಮನನೊಂದು ಯುವಕ ನೇಣಿಗೆ ಶರಣು

ಬೆಳಗಾವಿ:

ಉದ್ಯೋಗದಿಂದ ತೆಗೆದು ಹಾಕಿದ್ದಕ್ಕೆ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಮೊದಗಾ ಗ್ರಾಮದಲ್ಲಿ ಘಟನೆ ನಡೆದಿದ್ದು ಮೊದಗಾ ಗ್ರಾಮದ ನಿವಾಸಿ ರವಿ ವೀರನಗೌಡ ಹಟ್ಟಿಹೊಳಿ(24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಎಂಸಿಎ ಪದವೀಧರನಾಗಿದ್ದ ರವಿ ಕಳೆದೊಂದು ವರ್ಷದಿಂದ ಪುಣೆಯ ಗ್ಲೋಬಲ್ ಕಂಪನಿಯಲ್ಲಿ ರವಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ‌.ಕಳೆದ 15 ದಿನಗಳ ಹಿಂದೆ ರವಿಯನ್ನು ಯಾವುದೋ ಕಾರಣಕ್ಕೆ ಕೆಲಸದಿಂದ ತೆಗೆದು ಹಾಕಲಾಗಿತ್ತು ಎನ್ನಲಾಗಿದೆ. ಹೀಗಾಗಿ ಸ್ವಗ್ರಾಮ ಮೊದಗಾ ಗ್ರಾಮಕ್ಕೆ ಬಂದು ಮನೆಯಲ್ಲಿಯೇ ರವಿ ನೇಣಿಗೆ ಶರಣಾಗಿದ್ದಾನೆ. ಸಧ್ಯ ಸ್ಥಳಕ್ಕೆ ಮಾರಿಹಾಳ ಠಾಣೆಯ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply