Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ಧಾರವಾಡ

ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಬಿಸಿ..! 

ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್​ ಅನಿಶೆಟ್ಟರ್​ ಮನೆ ಮೇಲೆ ರೇಡ್​..!
ಧಾರವಾಡ: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮುಂಜಾನೆಯ ಸುಖ ನಿದ್ರೆಯಲ್ಲಿದ್ದ ಸರ್ಕಾರಿ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಹಿನ್ನೆಲೆ ಬೆಂಗಳೂರು, ಕೊಡಗು, ಚಿತ್ರದುರ್ಗ,ಬೆಳಗಾವಿ, ಬೀದರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳಿಗಳು ದಾಳಿ ನಡೆಸಿದ್ದಾರೆ.
ಬೆಳಗಾವಿ ಪಾಲಿಕೆ ಸಹಾಯಕ ಆಯುಕ್ತ ಸಂತೋಷ್​ ಅನಿಶೆಟ್ಟರ್​ ಮನೆ ಮೇಲೆ ಲೋಕಾ ರೇಡ್​ ನಡೆಸುತ್ತಿದ್ದು, ಧಾರವಾಡದಲ್ಲಿರುವ ಮನೆಯಲ್ಲಿ ಶೋಧ ಮಾಡುತ್ತಿದ್ದಾರೆ. 10 ಕೋಟಿಗೂ ಹೆಚ್ಚು ಸಂಪತ್ತು ಹೊಂದಿರುವ ಶಂಕೆ ವ್ಯಕ್ತವಾಗುತ್ತಿದೆ.
ಸಂತೋಷ್​ ಅನಿಶೆಟ್ಟಿಯ ಬಂಗಲೆ ಸಪ್ತಾಪುರದಲ್ಲಿದ್ದು, ಮನೆಯ ಇಂಟೀರಿಯರ್ ಕಂಡು ಲೋಕಾ ಟೀಂ ಶಾಕ್ ಆಗಿದ್ದಾರೆ. ಬಿಜಿಎಸ್ ಶಾಲೆ ಬಳಿಯ ಸಂತೋಷ್ ಸೋದರನ ಮನೆ ಮೇಲೂ ರೇಡ್​ ಮಾಡಿದೆ. ವೆಂಕಟಾಪೂರದ ಬಂಗಲೆ ಸೇರಿ ಐದು ಕಡೆ 15 ಅಧಿಕಾರಿಗಳ ದಾಳಿ ನಡೆಸಿದ್ದಾರೆ.ಸಂತೋಷ ಅನಿಶೆಟ್ಟರ್​​ ಈ ಹಿಂದೆ ಹು-ಧಾ ಪಾಲಿಕೆಯಲ್ಲಿದ್ದರು. ಸಂತೋಷ್​ ಮನೆಯಲ್ಲಿ ಬ್ರಿಟೀಷರ ಕಾಲದ ವಸ್ತುಗಳೂ ಪತ್ತೆಯಾಗಿದೆ. ಲೋಕಾಯುಕ್ತ ಎಸ್ಪಿ ಸತೀಶ್ ಚಿಟಗುಬ್ಬಿ , DySP ರಾಗಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
 
TV24 News Desk
the authorTV24 News Desk

Leave a Reply

error: Content is protected !!