ಹುಬ್ಬಳ್ಳಿ: ಚಾಕೊಲೇಟ್, ಹಣದ ಆಮಿಷ ತೋರಿಸಿ ಬಾಲಕರನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದ ಒಡಿಶಾ ಮೂಲದ ಇಲ್ಲಿನ ಪ್ರತಿಷ್ಠಿತ ಹೊಟೇಲನ ಕುಕ್ ಒಬ್ಬರನ್ನು ಸ್ಥಳೀಯರು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಇಲ್ಲಿನ ಸಿದ್ಧಲಿಂಗೇಶ್ವರ ಕಾಲೋನಿಯ ವಾಸವಿದ್ದ ಕುಕ್ ಬಡಾವಣೆಯ ಅಪ್ರಾಪ್ತರಿಗೆ ಚಾಕೊಲೇಟ್, ಐಸ್ ಕ್ರೀಂ, ಹಣದ ಆಮಿಷ ತೋರಿಸಿ ಪುಸಲಾಯಿಸುವ ಮೂಲಕ ತನ್ನ ರೂಮಗೆ ಕರೆದೊಯ್ಯುವುದು, ಬಾಲಕರನ್ನು ಲೈಂಗಿಕ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದನಲ್ಲದೆ, ಅದನ್ನು ವಿಡಿಯೋ ಮಾಡಿ ಅಶ್ಲೀಲ ಜಾಲತಾಣಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತದೆ.