ಬೆಳಗಾವಿ:
ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತವೆ ಎನ್ನುವ ಮಾತಿದೆ. ಆದರೆ ಇಲ್ಲಿ ದಂಪತಿಗಳಿಬ್ಬರೂ ಒಂದೇ ದಿನ ಅಸುನೀಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅಜೂರು ಗ್ರಾಮದ ಯಲಗೊಂಡ(67) ಸಾನೆ ಹಾಗೂ ಮಹಾದೇವಿ ಸಾನೆ(57) ಮೃತ ದಂಪತಿಗಳಾಗಿದ್ದು, ಯಲಗೊಂಡ ಕೊಲ್ಹಾಪುರದ ಮಗನ ಮನೆಯಲ್ಲಿ ವಿಶ್ರಾಂತಿಗೆಂದು ತೆರಳಿದ್ದರು. ಅಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಯಲಗೊಂಡ ಕೊನೆಯುಸಿರೆಳೆದಿದ್ದರು. ಅವರ ಪಾರ್ಥಿಯ ಶರೀರವನ್ನು ಸ್ವಗ್ರಾಮ ಅಜೂರು ಗ್ರಾಮಕ್ಕೆ ತಂದು ಮನೆಯ ಮುಂದೆ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿ ಸ್ವಶಾನಕ್ಕೆ ಪಾರ್ಥಿವ ಶರೀರ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ಪತ್ನಿ ಮಹಾದೇವಿ ಸಾನೆ ಕೂಡ ಕೊನೆಯುಸಿರೆಳೆದಿದ್ದಾರೆ. ಯಲಗೊಂಡ ಅವರನ್ನು ಕಳೆದುಕೊಂಡು ದುಃಖದಲ್ಲಿದ್ದ ಕುಟುಂಬಸ್ಥರಿಗೆ ಮಹಾದೇವಿಯವರ ಸಾವೂ ಸಹ ಬರಸಿಡಿಲು ಬಡಿದಂತಾಗಿದೆ. ಸತಿ ಪತಿಗಳು ಒಂದೇ ಬಾರಿ ಒಂದೇ ದಿನ ತೀರಿ ಹೋಗಿದ್ದು ಗ್ರಾಮಸ್ಥರಲ್ಲೂ ಅಚ್ಚರಿ ಮೂಡಿಸಿದೆ. ಜೊತೆಗೆ ಇಡೀ ಅಜೂರು ಗ್ರಾಮ ಶೋಕ ಸಾಗದಲ್ಲಿ ಮುಳುಗಿದೆ. ಸಧ್ಯ ಅಜೂರು ಗ್ರಾಮದಲ್ಲಿ ಸೂತಕಚ ಛಾಯೇ ಅವರಿಸಿದೆ.
