Warning: Trying to access array offset on false in /www/wwwroot/tv24plus.in/wp-content/plugins/newsmax-core/includes/core.php on line 87
ರಾಜ್ಯ

ಯಾವ ಸಚಿವರಿಗೆ ಯಾವ ಖಾತೆ ಹಂಚಿಕೆ, ನೋಡಿ ಕಂಪ್ಲೀಟ್ ಲಿಸ್ಟ್

ಸಚಿವರು ಖಾತೆಗಳು 
 ಬೆಂಗಳೂರು : ಕಾಂಗ್ರೆಸ ಸರಕಾರ  ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾತೆ ಹಂಚಿಕೆ ಮಾಡಿದ್ದು, ಹಣಕಾಸು, ಸಂಸದೀಯ ವ್ಯವಹಾರ, ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಗಳನ್ನು ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಂತೆ ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿಯನ್ನು ಪಡೆದುಕೊಂಡಿದ್ದಾರೆ.
ಹಿರಿಯ ಶಾಸಕ ಹೆಚ್.ಕೆ.ಪಾಟೀಲ್‍ಗೆ ಕೈಗಾರಿಕೆ, ಮಹದೇವಪ್ಪ ಅವರಿಗೆ ಸಮಾಜ ಕಲ್ಯಾಣ, ಕೆ.ಜೆ.ಜಾರ್ಜ್‍ಗೆ ಇಂಧನ, ಕೆ.ಹೆಚ್.ಮುನಿಯಪ್ಪ ಅವರಿಗೆ ಆಹಾರ-ನಾಗರೀಕ ಪೂರೈಕೆ ಸೇರಿದಂತೆ ಪ್ರಮುಖ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ.
* ಸಿದ್ದರಾಮಯ್ಯ( ಮುಖ್ಯಮಂತ್ರಿ)- ಹಣಕಾಸು, ಸಂಸದೀಯ ವ್ಯವಹಾರಗಳ, ಸಿಬ್ಬಂದಿ, ಆಡಳಿತ ಸುಧಾರಣೆ, ವಾರ್ತಾ
 
* ಡಿ.ಕೆ.ಶಿವಕುಮಾರ್- ಬೃಹತ್, ಮಧ್ಯಮ ನೀರಾವರಿ, ಬೆಂಗಳೂರು ನಗಾರಾಭಿವೃದ್ಧಿ.
 
* ಡಾ.ಜಿ.ಪರಮೇಶ್ವರ್- ಗೃಹ (ಗುಪ್ತಚರ ಹೊರತುಪಡಿಸಿ)
 
* ಕೆ.ಹೆಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ
 
* ಕೆ.ಜೆ.ಜಾರ್ಜ್-ಇಂಧನ
 
* ಎಂ.ಬಿ.ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ
 
* ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
 
* ಪ್ರಿಯಾಂಕ್ ಖರ್ಗೆ- ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್
 
* ರಾಮಲಿಂಗಾರೆಡ್ಡಿ- ಸಾರಿಗೆ.
 
* ಜಮೀರ್ ಅಹ್ಮದ್‍ಖಾನ್- ವಸತಿ, ವಕ್ಫ್, ಅಲ್ಪಸಂಖ್ಯಾತ ಅಭಿವೃದ್ಧಿ.
 
* ಹೆಚ್.ಕೆ.ಪಾಟೀಲ್- ಕಾನೂನು, ಸಣ್ಣ ನಿರಾವರಿ.
 
* ಕೃಷ್ಣ ಬೈರೇಗೌಡ- ಕಂದಾಯ.
 
* ಎನ್,ಚಲುವರಾಯಸ್ವಾಮಿ- ಕೃಷಿ.
 
* ಕೆ.ವೆಂಕಟೇಶ್- ಪಶುಸಂಗೋಪನೆ ಮತ್ತು ರೇಷ್ಮೆ.
 
* ಡಾ. ಹೆಚ್.ಸಿ.ಮಹದೇವಪ್ಪ- ಸಮಾಜ ಕಲ್ಯಾಣ.
 
* ಈಶ್ವರ್ ಖಂಡ್ರೆ- ಅರಣ್ಯ, ಪರಿಸರ.
 
* ಕ್ಯಾತಸಂದ್ರದ ಎನ್.ರಾಜಣ್ಣ -ಸಹಕಾರ.
 
* ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ.
 
* ಶರಣಬಸಪ್ಪ ದರ್ಶನಾಪೂರ್- ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು.
 
* ಶಿವಾನಂದ ಪಾಟೀಲ್ – ಸಕ್ಕರೆ,ಜವಳಿ, ಎಪಿಎಂಸಿ
 
* ಆರ್.ಬಿ.ತಿಮ್ಮಾಪೂರ್ -ಅಬಕಾರಿ, ಮುಜರಾಯಿ.
 
* ಎಸ್.ಎಸ್.ಮಲ್ಲಿಕಾರ್ಜುನ್- ಗಣಿ, ಭೂ ವಿಜ್ಞಾನ, ತೋಟಗಾರಿಕೆ.
 
* ಶಿವರಾಜ ಎಸ್.ತಂಗಡಗಿ-ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ.
 
* ಡಾ. ಶರಣಪ್ರಕಾಶ್ ಆರ್.ಪಾಟೀಲ್ -ಉನ್ನತ ಶಿಕ್ಷಣ.
 
* ಮಂಕಾಳವೈದ್ಯ- ಮೀನುಗಾರಿಕೆ, ಬಂದರು, ಒಳಸಾರಿಗೆ.
 
* ಲಕ್ಷ್ಮೀ ಹೆಬ್ಬಾಳ್ಕರ್-ಮಹಿಳಾ-ಮಕ್ಕಳ ಅಭಿವೃದ್ಧಿ, ಹಿರಿಯನಾಗರಿಕರ ಕಲ್ಯಾಣ.
 
* ರಹೀಂಖಾನ್- ಪೌರಾಡಳಿತ.
 
* ಡಿ.ಸುಧಾಕರ್- ಮೂಲಸೌಕರ್ಯ ಅಭಿವೃದ್ಧಿ, ಯೋಜನೆ, ಸಾಂಖ್ಯಿಕ.
 
* ಸಂತೋಷ್ ಎಸ್.ಲಾಡ್- ಕಾರ್ಮಿಕ, ಕೌಶಲ್ಯಾಭಿವೃದ್ಧಿ.
 
* ಎನ್.ಎಸ್.ಬೋಸರಾಜು- ಪ್ರವಾಸೋದ್ಯಮ, ವಿಜ್ಞಾನ, ತಂತ್ರಜ್ಞಾನ
 
* ಬಿ.ಎಸ್. ಸುರೇಶ್ – ನಗರಾಭಿವೃದ್ಧಿ, ನಗರ ಯೋಜನೆ.
 
* ಮಧು ಬಂಗಾರಪ್ಪ – ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ.
 
* ಡಾ.ಎಂ.ಸಿ.ಸುಧಾಕರ್- ವೈದ್ಯಕೀಯ ಶಿಕ್ಷಣ.
 
* ಬಿ.ನಾಗೇಂದ್ರ-ಯುವಜನಸೇವೆ, ಕ್ರೀಡೆ, ಕನ್ನಡ ಮತ್ತು ಸಂಸ್ಕೃತಿ .
TV24 News Desk
the authorTV24 News Desk

Leave a Reply

error: Content is protected !!