ಬೆಳಗಾವಿಬೆಳಗಾವಿ ನಗರರಾಜ್ಯ

ಬೆಳಗಾವಿ ಬೆಂಗಳೂರು ವಂದೇ ಭಾರತ್ ರೈಲಿಗೆ ನಾಳೆ ಮೋದಿ ಚಾಲನೆ-ಶೆಟ್ಟರ್

ಬೆಳಗಾವಿ:

ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿ ನಾಳೆಯಿಂದ ಬೆಳಗಾವಿ-ಬೆಂಗಳೂರು ನಡುವೆ ಹೊಸ ವಂದೇ ಭಾರತ್ ಸಂಚಾರ ಆರಂಭವಾಗಲಿದೆ ಎಂದು ಮಾಹಿತಿ ‌ನೀಡಿದರು.ವಂದೇ ಭಾರತ್ ರೈಲು ಬೆಳಗಾವಿಗೆ ಬರೋದು ಬೆಳಗಾವಿಗರ ಬಹುದಿನಗಳ ಬೇಡಿಕೆ ಆಗಿತ್ತು,ಚುನಾವಣೆ ಸಂದರ್ಭದಲ್ಲಿ ಎಲ್ಲಾ ಕಡೆ ಇದೇ ವಂದೇ ಭಾರತ್ ರೈಲು ಬೆಳಗಾವಿಗೆ ಬರಬೇಕು ಎಂಬ ಒತ್ತಾಯ ಇತ್ತು.
ನಾನು ಸಂಸದನಾದ ದಿನದಿಂದ ಇದರ ಬಗ್ಗೆ ಪ್ರಯತ್ನ ಮಾಡಿದ್ದೇನೆ.
ಮೊದಲು ಪುಣೆ- ಬೆಳಗಾವಿ ನಡುವೆ ಸಂಚಾರ ಆರಂಭ ಆಯಿತು,ಧಾರವಾಡ ರೈಲು ಬೆಳಗಾವಿವರೆಗೆ ಮುಂದುವರಿಸಲು ಮನವಿ ಮಾಡಿದ್ವಿ‌ ಆದರೆ ತಾಂತ್ರಿಕ ಕಾರಣಗಳಿಂದಾಗಿ ಬೆಳಗಾವಿಗೆ ವಂದೇ ಭಾರತ್ ರೈಲು ಬರಲಾಗಲಿಲ್ಲ.ಆದರೆ ವಂದೇ ಭಾರತ್ ರೈಲಿಗಾಗಿ ನನ್ನ ಪ್ರಯತ್ನ, ಹೋರಾಟ ಮುಂದುವರೆಸಿದೆ.
ಪ್ರಧಾನಿ ಭೇಟಿ ವೇಳೆಯಲ್ಲಿ ವಂದೇ ಭಾರತ್ ರೈಲು ಬಗ್ಗೆ ಮನವಿ ಮಾಡಿದೆ,ಸಚಿವರಾದ ಪ್ರಲ್ಹಾದ್ ಜೋಶಿ, ನಾವು ಸಭೆ ಮಾಡಿದೇವು.
ನಂತರ 2025 ಮೇ 8ರಂದು ಹೊಸ ರೈಲು ನಿಗದಿಯಾಯಿತು.
ಎರಡು ತಿಂಗಳ ಬಳಿಕ ವಂದೇ ಭಾರತ್ ರೈಲು ಆರಂಭಕ್ಕೆ ಮೂಹರ್ತ ನಿಗದಿಯಾಗಿದೆ ಅವತ್ತು ರಾತ್ರಿಯೇ ರೈಲ್ವೆ ಸಚಿವರಿಗೆ ಪ್ರಧಾನಿ ಸೂಚನೆ ಕೊಟ್ಟರು,ವಂದೇ ಭಾರತ್ ರೈಲು ಆಗಮಿಸಲು ಪ್ರಧಾನಿ ನರೇಂದ್ರ ಮೋದಿ ಕಾರಣ,ಪ್ರಧಾನಿಗಳು ಹಾಗೂ ರೇಲ್ವೆ ಸಚಿವರು, ಜೋಶಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ.ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸುತ್ತಾರೆ.ನಾಳೆ ಸಂಜೆ ಬೆಳಗಾವಿ ರೈಲು ನಿಲ್ದಾಣದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಶೆಟ್ಟರ್ ಮಾಹಿತಿ ಹಂಚಿಕೊಂಡರು.

TV24 News Desk
the authorTV24 News Desk

Leave a Reply

error: Content is protected !!