ಬೆಳಗಾವಿ:
ಕಾಲು ದಾರಿ ವಿಚಾರವಾಗಿ ಮಹಿಳೆ ಮೇಲೆ ವ್ಯಕ್ತಿಯೊಬ್ಬನಿಂದ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ.ಕಾಲು ದಾರಿ ಬಳಸಿ ತನ್ನ ಜಮೀನಿನಲ್ಲಿ ಹಾದು ಹೋಗಿದ್ದಕ್ಕಾಗಿ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗಿದ್ದು ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಹೊನಕಲ್ ಗ್ರಾಮದಲ್ಲಿ ಘಟನೆ ನಡೆದಿದೆ. ನಾಗು ಮಾದರ ಹಾಗೂ ವಾಸುದೇವ ಪಾಟೀಲ ಎಂಬುವವರ ಜಮೀನು ಅಕ್ಕಪಕ್ಕದಲ್ಲೆ ಇದ್ದು ಹೊನಕಲ್ ಗ್ರಾಮ ಹದ್ದಿಯಲ್ಲಿ ಇಬ್ಬರ ಜಮೀನುಗಳು ಬರುತ್ತವೆ ತನ್ನ ಜಮೀನಿನಲ್ಲಿ ಕಾಲುದಾರಿಯಿದೆ ನೀವು ಹಾಯಬೇಡಿ ಎಂದು ಹಲವಾರು ವರ್ಷಗಳಿಂದ ವಾಸುದೇವ ತಂಟೆ ಮಾಡುತ್ತಾ ಬಂದಿದ್ದ ಎನ್ನಲಾಗಿದೆ.ನಾಗು ಮಾದರ ಎಂಬುವವರ ಜೊತೆ ಪದೇ ಪದೇ ಕಾಲುದಾರಿ ವಿಚಾರವಾಗಿ ವಾಸುದೇವ ಜಗಳ ಮಾಡುತ್ತಿದ್ದ ಎನ್ನಲಾಗಿದೆ.ನಾಗು ಮಾದರ ಅವರ ಜಮೀನಿನನ್ನು ವಾಸುದೇವ ಅತೀಕ್ರಮಣ ಮಾಡಿಕ್ಕೊಂಡಿದ್ದ ಎನ್ನಲಾಗಿದೆ.ಹಲ್ಲೆ ಮಾಡಲು ಕೈಯಲ್ಲಿ ಕುಡಗೋಲು ಹಿಡಿದುಕ್ಕೊಂಡು ವಾಸುದೇವ ಬಂದಿದ್ದ ಎನ್ನಲಾಗಿದೆ.ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಶೋಭಾ ಎಂಬ ಮಹಿಳೆ ಮೇಲೆ ಕೊಯ್ತಾದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು
ಅವ್ಯಾಚ್ಛ ಪದಗಳಿಂದ ನಿಂದನೆ ಮಾಡಿ ನಂತರ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಗಲಾಟೆ ಬಿಡಿಸಲಿಕೆ ಹೋಗಿದ್ದ ಜಾನಕು ಮಾದರ ಎಂಬುವವರಿಗೂ ಸಹ ಬಲವಾಗಿ ಕೊಯ್ತಾದಿಂದ ವಾಸುದೇವ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.ಶೋಭಾ ಅವರಿಗೆ ಕೊಯ್ತಾದಿಂದ ಹಲ್ಲೆ ಮಾಡಿದ ಪರಿಣಾಮ ತಲೆಗೆ,ಕೈಗಳಿಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿದ್ದು ವಾಸುದೇವನಿಂದ ತಪ್ಪಿಸಿಕ್ಕೊಂಡು ಜಮೀನಿನಿಂದ ಗ್ರಾಮಕ್ಕೆ ಓಡೋಡಿ ಬಂದು ಶೋಭಾ ಮಾದರ ಜೀವ ಉಳಿಸಿಕೊಂಡಿದ್ದಾಳೆ ಎನ್ನಲಾಗಿದೆ.ಸ್ಥಳೀಯರು ಹಾಗೂ ಕುಟುಂಬಸ್ಥರು ಶೋಭಾಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯಿಂದ ಆಸ್ಪತ್ರೆಗೆ ಭೇಟಿ ನೀಡಿ ಪೊಲೀಸರು ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ.ಶೋಭಾ ಪತಿ ನಾಗು ಮಾದರ ಅವರಿಂದ ವಾಸುದೇವ ವಿರುದ್ಧ ದೂರು ದಾಖಲಾಗಿದ್ದು ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.













