ಬೆಳಗಾವಿ:
ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆ ಮೇಲೆ ಇಡಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ವಲಯ ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ ಮೇಲೆ ಮನೆಯಲ್ಲಿ ಇಡಿ ದಾಳಿಯಲ್ಲಿ ಎನೇನು ಸಿಕ್ಕಿತ್ತು ಎಂಬುದರ ಕುರಿಯು ಇಡಿ ಸ್ಪಷ್ಟನೆ ನೀಡಿದೆ.ದಾಳಿ ಅಂತ್ಯ ಬೆನ್ನಲ್ಲೇ ಇಡಿ ಅಧಿಕಾರಿಗಳಿಂದ ಮಾಧ್ಯಮಗಳಿಗೆ ಮಾಹಿತಿ ರಿಲೀಸ್ ಮಾಡಲಾಗಿದ್ದು ಒಟ್ಟು 13.3ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ವಶಪಡಿಸಿಕೊಂಡಿದೆ.5.5ಕೋಟಿ ನಗದು ಸೇರಿ 7.8ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ 3.3ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿದ್ದು ಕ್ಯಾಶ್ ಬುಕ್, ಆಸ್ತಿ ಪತ್ರಗಳು ದಾಳಿಯಲ್ಲಿ ಪತ್ತೆಯಾಗಿವೆ. 2002ರ ಸೆಕ್ಷನ್ 17ರ ಅಡಿಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು 14 ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದ ಇಡಿ ಬೆಳಗಾವಿ, ಮೈಸೂರು, ಬೆಂಗಳೂರು ಮೂರು ಕಡೆ ದಾಳಿ ನಡೆಸಿತ್ತು.ರಾಜ್ಯ ಅಬಕಾರಿ ಇಲಾಖೆಯಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ನಡೆಯುತ್ತಿದ್ದು ಇಡಿ ದಾಳಿಯಲ್ಲಿ ಬೆಳಕಿಗೆ ಬಂದಿದ್ದು ಸರ್ಕಾರಿ ಅಧಿಕಾರಿಗಳು ಅಕ್ರಮವಾಗಿ ಆಸ್ತಿ ಸಂಪಾದಿಸಿರುವ ಆರೋಪಗಳ ಹಿನ್ನೆಲೆ ದಾಳಿ ಮಾಡಲಾಗಿತ್ತು.ಲೋಕಾಯುಕ್ತ ಪೊಲೀಸರು ಕರ್ನಾಟಕ ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ ದಾಖಲಿಸಿದ ಎಫ್ಐಆರ್ ಆಧರಿಸಿ ದಾಳಿ ಮಾಡಲಾಗಿತ್ತು. ಅಬಕಾರಿ ಲೈಸೆನ್ಸ್ ಮಂಜೂರು ಮಾಡುವ, ನವೀಕರಿಸುವ ಪ್ರಕ್ರಿಯೇಯಲ್ಲಿ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲೂ ಸಹ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇನಾಮಿ ವ್ಯವಹಾರ ಹಾಗೂ ಕುಟುಂಬದ ಸದಸ್ಯರು ಮತ್ತು ಸಹಚರರ ಹೆಸರಿನಲ್ಲಿ ಹೂಡಿಕೆ ಮಾಡಿ ಹಣ ವರ್ಗಾವಣೆ ಮಾಡಿದ್ದ ದಾಖಲೆಗಳು ಇಡಿಗೆ ಲಭ್ಯವಾಗಿವೆ.ಶೋಧ ಕಾರ್ಯದಲ್ಲಿ ಅಬಕಾರಿ ಅಧಿಕಾರಿ ಜಗದೀಶ್ ನಾಯಕ್, ಕೆ.ಎಂ.ತಮ್ಮಣ್ಣ ಮತ್ತು ವೈ.ಡಿ ಮಂಜುನಾಥ್ ಹಾಗೂ ಕುಟುಂಬ ಸದಸ್ಯರು ಒಳಗೊಂಡಿದೆ.ವಿವಿಧ ಮದ್ಯದಂಗಡಿಗಳಿಂದ ಪ್ರತಿ ತಿಂಗಳು ಲಂಚ ಪಡೆದ ಬಗ್ಗೆ ಡೈರಿಯಲ್ಲಿ ಉಲ್ಲೇಖವಾಗಿದೆ.ಲಂಚ ಪಡೆದ ಕುರಿತು ಉಲ್ಲೇಖಿಸಿದ ಡೈರಿ ಕೂಡ ಪತ್ತೆಯಾಗಿದ್ದು ಲಂಚ ಪಡೆದ ಹಣವನ್ನ ವೈಯಕ್ತಿಕ ಬಳಕೆ, ಆಸ್ತಿ ಖರೀದಿ ಮತ್ತು ವ್ಯವಹಾರ ಹೂಡಿಕೆಗೆ ಬಳಕೆಯಾಗಿವೆ.ಇಡಿ ಪತ್ರಿಕಾ ಪ್ರಕಟಣೆಯಲ್ಲಿ ವೈ ಮಂಜುನಾಥ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದಿದ್ದು ತನಿಖೆ ಮುಂದುವರೆಯುವುದಾಗಿ ಇಡಿ ಮಾಹಿತಿ ನೀಡಿದೆ.












