


ಬೆಳಗಾವಿ:
ರಾಜ್ಯದಲ್ಲಿ ಮಳೆ ಕೈ ಕೊಟ್ಟಿದ್ದರಿಂದ ಮಳೆ ಇಲ್ಲದೆ ಜಲಾಶಯಗಳು ಖಾಲಿಯಾಗುತ್ತಿವೆ.ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಬಹುತೇಕ ಜಲಾಶಯಗಳು ಖಾಲಿ ಹಂತಕ್ಕೆ ಬಂದಿವೆ.ಬೆಳಗಾವಿಯ ಅತ್ಯಂತ ದೊಡ್ಡ ಜಲಾಶಯವೆಂದೇ ಖ್ಯಾತಿಯಾಗಿರುವ ಹಿಡಕಲ್ ಜಲಾಶಯ ಡೆಡ್ ಸ್ಟೋರೇಜ್ ಹಂತಕ್ಕೆ ಬಂದು ತಲುಪಿದೆ. ಕೇವಲ ಬೆಳಗಾವಿ ಅಷ್ಟೇ ಅಲ್ಲದೆ ಬೆಳಗಾವಿ, ಬಾಗಲಕೋಟೆ ಜಿಲ್ಲೆಗೆ ಕುಡಿಯುವ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಹಿಡಕಲ್ ಜಲಾಶಯವೇ ಆಧಾರ ಸ್ತಂಭವಾಗಿದೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಜಾ ಲಖಮಗೌಡ ಹಿಡಕಲ್ ಜಲಾಶಯ ಒಟ್ಟು 51 ಟಿ.ಎಮ್.ಸಿ ಸಾಮರ್ಥ್ಯ ಹೊಂದಿದ್ದು ಸದ್ಯ ಹಿಡಕಲ್ ಜಲಾಶಯದಲ್ಲಿ 5 ಟಿಎಮ್.ಸಿ ನೀರು ಮಾತ್ರ ಬಾಕಿ ಉಳಿದುಕೊಂಡಿದೆ.ಕುಡಿಯಲು ಮಾತ್ರ ಬಳಕೆ ಮಾಡಿಕೊಂಡರೆ ಇನ್ನು ಒಂದು ತಿಂಗಳಿಗೆ ಆಗುವವರೆಗೆ ಮಾತ್ರ ನೀರು ಸ್ಟಾಕ್ ಇದ್ದು ಬೆಳಗಾವಿ ನಗರ, ಹುಕ್ಕೇರಿ ಸಂಕೇಶ್ವರ ಸೇರಿದಂತೆ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ನೀರಿನ ಇದೇ ಜಲಾಶಯವಾಗಿದ್ದು
ಹಿಡಕಲ್ ಜಲಾಶಯದ ನೀರನ್ನೆ ನಂಬಿಕೊಂಡಿರುವ ನೂರಾರು ಹಳ್ಳಿಗಳು ನೀರು ಖಾಲಿಯಾದರೆ ಪರದಾಡುವ ಒರಿಸ್ಥಿತಿ ನಿರ್ಮಾಣವಾಗಲಿದೆ.ಪ್ರತಿವರ್ಷ ಜೂನ ತಿಂಗಳ ಹೊತ್ತಿಗೆ ಶೇ.50 ರಷ್ಟು ಜಲಾಶಯ ಭರ್ತಿಯಾಗಿರುತ್ತಿತ್ತು ಆದರೆ ಈ ವರ್ಷ ಸಕಾಲಕ್ಕೆ ಮಳೆಯಾಗದೆ ಜಲಾಶಯ ಈಗ ಖಾಲಿ ಖಾಲಿ ಹೊಡೆಯುತ್ತಿದೆ.ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಜಲಾಶಯ ಇದಾಗಿದ್ದು ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಹುಟ್ಟಿ ರಾಜ್ಯಕ್ಕೆ ಹರಿದು ಬರುವ ಘಟಪ್ರಭಾ ನದಿ ನೀರಿನ ಮೇಲೆ ಎರಡು ಜಿಲ್ಲೆಯ ಸಾವಿರಾರು ಹಳ್ಳಿಯ ಜನರು ಅವಲಂಬಿತರಾಗಿದ್ದಾರೆ.
ಜಲಾಶಯದ ನೀರು ಖಾಲಿಯಾಗುತ್ತಿರುವ ಹಿನ್ನೆಲೆ ಜನರಲ್ಲಿ ಆತಂಕ ಶುರುವಾಗಿದ್ದು
ಕಳೆದ ವರ್ಷ ಜೂನ 26 2025 ರಂದು ನೀರಿನ ಒಳಹರಿವು 26,420 ಕ್ಯೂಸೇಕ್ ನಷ್ಟಿತ್ತು.
ಹಾಗೂ ಜಲಾಶಯದಲ್ಲಿ ಒಟ್ಟು ನೀರಿನ ಸಂಗ್ರಹ, 21.8 TMCಯಷ್ಟಿತ್ತು. ಆದರೆ 26 ಜೂನ, 2026 ನೀರಿನ ಒಳ ಹರಿವು, 00 ಶೂನ್ಯ ಕ್ಯೂಸೆಕ್ ಆಗಿದ್ದು ನೀರಿನ ಸಂಗ್ರಹ, ಕೇವಲ 5.2 TMC ಮಾತ್ರ ಇದೆ.









