Uncategorized

ಸತತ 24 ಗಂಟೆಗಳ ನಂತರ ಮಂಜುನಾಥ ಮನೆಯ ಮೇಲಿನ ಇಡಿ ದಾಳಿ ಅಂತ್ಯ!

ಬೆಳಗಾವಿ:

ಸಚಿವ ಸತೀಶ್ ಜಾರಕಿಹೊಳಿ‌ ಬಾಮೈದನ ಮನೆ ಮೇಲೆ ಇಡಿ ದಾಳಿ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ಸತತ 24 ಗಂಟೆ ಬಳಿಕ ಇಡಿ ದಾಳಿ ಅಂತ್ಯವಾಗಿದೆ.
ಅಬಕಾರಿ ಇಲಾಖೆ ಹೆಚ್ಚುವರಿ ಆಯುಕ್ತ ವೈ.ಮಂಜುನಾಥ ಮನೆ ಸೇರಿ 10 ಕ್ಕೂ‌ ಅಧಿಕ ಕಡೆ ದಾಳಿ ನಡೆಸಿದ್ದ ಅಧಿಕಾರಿಗಳು
ಬೆಳಗಾವಿಯಲ್ಲಿಯೇ ಆರು ಕಡೆ ದಾಳಿ ಮಾಡಿ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.ಆರು ಕಡೆಗಳಲ್ಲಿ ದಾಳಿ‌ ಮುಗಿಸಿ ಇಡಿ ಅಧಿಕಾರಿಗಳು ಹೊರಟಿದ್ದಾರೆ.
ಬೆಳಗಾವಿಯ ಟಿವಿ ಸೆಂಟರ್ ಮನೆಯಲ್ಲಿ ಶೋಧಕಾರ್ಯ ಮುಕ್ತಾಯಗೊಂಡಿದ್ದು 24 ಗಂಟೆಗಳ ಕಾಲ ಮಂಜುನಾಥ ಮನೆಯಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು.
ಮಂಜುನಾಥ ಮತ್ತೊಬ್ಬ ಆಪ್ತ ಗೋವಾ ‌ಮೂಲದ ಲೋಬೋಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಬೆಳಗಾವಿಯಲ್ಲಿ ಲೋಬೋ ಸಿಗದ ಕಾರಣ ಗೋವಾಗೆ ಎರಡು ಇಡಿ ತಂಡ ರವಾನೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂಳಿದ ಇಡಿ ಅಧಿಕಾರಿಗಳ ತಂಡ ಬೆಂಗಳೂರಿಗೆ ತೆರಳಿರುವ ಸಾಧ್ಯತೆ ಇದ್ದು ಬೆಳಗಾವಿ, ಬೆಂಗಳೂರು, ಮೈಸೂರು ಸೇರಿ ವಿವಿಧೆಡೆ ದಾಳಿಯಲ್ಲಿ ಸಾಕಷ್ಟು ಮಹತ್ವದ ದಾಖಲೆ, ಚಿನ್ನಾಭರಣ ಪತ್ತೆಯಾಗಿವೆ ಎನ್ನಲಾಗಿದೆ‌.
ಮಹತ್ವದ ದಾಖಲೆ, ಬೇನಾಮಿ ಬಾರ್ ಲೈಸೆನ್ಸ್, ಬೇನಾಮಿ ಆಸ್ತಿ ಪತ್ರ ತೆಗೆದುಕೊಂಡು ಅಧಿಕಾರಿಗಳು ಹೊರಟಿದ್ದು
ದಾಳಿ ವರದಿಯನ್ನ ಇಡಿ ಡೈರೆಕ್ಟರ್ ಗೆ ಅಧಿಕಾರಿಗಳು ನೀಡಲಿದ್ದಾರೆ.

TV24 News Desk
the authorTV24 News Desk

Leave a Reply

error: Content is protected !!