ಕ್ರೈಂಬೆಳಗಾವಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ತಪ್ಪದ ಅಪಘಾತಗಳ ಸರಣಿ ಡಿವೈಡರ್ ಏರಿದ ವಾಹನ!

ಬೆಳಗಾವಿ:

ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಬಡೇಕೊಳ್ಳಮಠದ ತಿರುವಿನಲ್ಲಿ‌ ನಗರ ಪೊಲೀಸ್ ಆಯುಕ್ತರ ಸಲಹೆ ಹಾಗೂ ಸೂಚನೆಯಂತೆ ಹಲವಾರು ಮುಂಜಾಗೃತಾ ಕ್ರಮಗಳನ್ನು ಕೈಗೊಂಡರೂ ಸಹ ವಾಹನ ಅಪಘಾತಗಳು ತಪ್ಪುತ್ತಲೇ ಇಲ್ಲ‌. ಅದಕ್ಕೆ ತಾಜಾ ಉದಾಹರಣೆಯಂತೆ ಇಂದು ಬೆಳಗ್ಗೆ ಟಾಟಾಎಸ್ ಗೂಡ್ಸ್ ವಾಹನವೊಂದು ಡಿವೈಡರ್ ಏರಿದ ಘಟನೆ ನಡೆದಿದೆ. ಬೆಳಗಾವಿಯಿಂದ ಧಾರವಾಡ ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ನಡೆದಿದೆ. ಹೆದ್ದಾರಿಯು ರಸ್ತೆ ತಿರುವು ಮತ್ತು ಇಳಿಜಾರಿನಿಂದ ಕೂಡಿದ್ದು ವಾಹನ ಸವಾರರು ಹೈಸ್ಪೀಡಾಗಿ ಬರ್ತಿರೋದು ಘಟನೆಗೆ ಕಾರಣ ಎಂದು ಅಂದಾಜಿಸಲಾಗುತ್ತಿದೆ. ಸಧ್ಯ ಈ ಅಪಘಾತದಲ್ಲಿ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೊಲೀಸರು ದಾವಿಸಿ ಪರಿಶೀಲನೆ ನಡೆಸಿದ್ದು ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

TV24 News Desk
the authorTV24 News Desk

Leave a Reply