

ಬೆಳಗಾವಿ:
ಕುಡಿಯುವ ನೀರಿಗಾಗಿ ದಂಪತಿಗಳಿಬ್ಬರು ದಯಾಮರಣಕೋರಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದಯಾಮರಣ ಕೋರಿ ದಂಪತಿಯಿಂದ ತಹಶಿಲ್ದಾರ್ ಗೆ ಅರ್ಜಿ ಸಲ್ಲಿಸಲಾಗಿದೆ.ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ನಡೆದ ಘಟನೆ ನಡೆದಿದ್ದು
ಕೌಟುಂಬಿಕ ಜಗಳದಲ್ಲಿ ಪಟ್ಟಣ ಪಂಚಾಯತಿ ಅಧಿಕಾರಿಗಳು ಮದ್ಯ ಪ್ರವೇಶಿಸಿ ನೀರು ಸ್ಥಗಿತಗೊಳಿಸಿರುವ ಆರೋಪ ಕೇಳಿ ಬಂದಿದೆ.ಕುಡಿಯುವ ನೀರು ಸ್ಥಗಿತಗೊಳಿಸಿದ ಹಿನ್ನಲೆ ದಯಾಮರಣಕ್ಕೆ ದಂಪತಿಗಳಿಂದ ಅರ್ಜಿ ಸಲ್ಲಿಸಲಾಗಿದ್ದು ಕಿತ್ತೂರು ಪಟ್ಟಣದ ಗುರುವಾರ ಪೇಟೆಯ ಮಂಜುನಾಥ ಸವದಿ ಹಾಗೂ ಪತ್ನಿ ಶ್ರುತಿ ಅವರಿಂದ ದಯಾಮರಣಕ್ಕೆ ಅರ್ಜಿ ಸಲ್ಲಿದ್ದಾರೆ.ಕಿತ್ತೂರು ಪಟ್ಟಣ ಪಂಚಾಯತಿ ಸಿಬ್ಬಂದಿಗಳು ಕುಡಿಯುವ ನೀರಿನ ನಲ್ಲಿ ನಿಲ್ಲಿಸಿದ್ದರಿಂದ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.ನಲ್ಲಿಯ ಬಾಕಿ ಬಿಲ್ ಕೂಡಾ ಪಾವತಿಮಾಡಿದ್ದೇವೆ ಎಂದು ದಂಪತಿ ಅಳಲು ತೋಡಿಕೊಂಡಿದ್ದಾರೆ.ಕೌಟುಂಬಿಕ ಜಗಳದಲ್ಲಿ ಪಟ್ಟಣ ಪಂಚಾಯತಿ ಸಿಬ್ಬಂದಿ ಮಧ್ಯಪ್ರವೇಶಿಸಿ ನಲ್ಲಿ ಸ್ಥಗಿತಗೊಳಿಸಿದ ಆರೋಪ ಸಿಬ್ಬಂಧಿ ಮೇಲೆ ಬಂದಿದೆ. ವಯುಕ್ತಿಕ ಜಗಳದಲ್ಲಿ ನಲ್ಲಿ ಬಂದ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ದಂಪತಿ ಅಳಲು ತೋಡಿಕೊಂಡಿದ್ದು ಜು.6 ರಂದು ಪಟ್ಟಣ ಪಂಚಾಯತಿ ಮುಂದೆ ನಮಗೆ ದಯಾಮರಣ ಕರುಣಿಸಿ ಎಂದು ತಹಶಿಲ್ದಾರಗೆ ಮನವಿ ಮಾಡಿದ್ದಾರೆ.ದಯಾಮರಣ ಕೋರಿ ಕಿತ್ತೂರು ತಹಶಿಲ್ದಾರ ಕಲಗೌಡ ಪಾಟೀಲ ಅವರಿಗೆ ದಂಪತಿಗಳಿಬ್ಬರು ಮನವಿ ಸಲ್ಲಿಸಿದ್ದಾರೆ.









