Uncategorized

ಧುಪದಾಳ ಜಲಾಶಯಕ್ಕೆ ಸತೀಶ್ ಭೇಟಿ ಫಟಪ್ರಭಾ ಎಡದಂಡೆ ಕಾಲುವೆಯಿಂದ ಬಾಗಲಕೋಟೆಗೆ ನೀರು!ಸತೀಶ್!

ಬೆಳಗಾವಿ:

ಎರಡು ದಿನಗಳಿಂದ ನಿರಂತರ ಮಳೆಯಿಂದಾಗಿ ಬತ್ತುವ ಹಂತ ತಲುಪಿದ್ದ ಘಟಪ್ರಭಾ ನದಿಗೆ ಜೀವಕಳೆ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಕ್ಷಿದಾಮ(ಧುಪದಾಳ) ಜಲಾಶಯಕ್ಕೆ ಸಚಿವ ಸತೀಶ್ ಜಾರಕಿಹೊಳಿ ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲನೆ ನಡೆಸಿದರು. ಘಟಪ್ರಭಾ ಎಡದಂಡೆ ಕಾಲುವೆ ಹಾಗೂ ನದಿಯ ನೀರಿನ ಪ್ರಮಾಣವನ್ನು ವೀಕ್ಷಣೆ ಮಾಡಿ ನಂತರ ಮಾತನಾಡಿ ಮಳೆಯಾದ ಕಾರಣ ಎಲ್ಲರಲ್ಲೂ ಅಂತಂಕ ಮನೆ ಮಾಡಿತ್ತು. ಆದರೆ ಈಗ ಮಳೆಯಾಗುತ್ತಿದೆ. ಕಾಲುವೆಗಳಿಗೆ ನೀರು ಹರಿಸಿ ಎಂದು ರೈತರು ಬೇಡಿಕೆ ಇಟ್ಟಿದ್ದರು. ಸದ್ಯ ಘಟಪ್ರಭಾ ಎಡದಂಡೆ ಕಾಲುವೆಯ ಮೂಲಕ ಬಾಗಲಕೋಟೆಗೆ ನೀರು ಮುಟ್ಟಿಸುವ ಕೆಲಸ ಮಾಡುತ್ತೆವೆ. ಈಗಾಗಲೇ ಪ್ರಯೋಗಿಕವಾಗಿ 1000 ಸಾವಿರ ಕ್ಯೂಸೇಕ್ ನೀರನ್ನು ಬಿಡಲಾಗಿದೆ. ಮಧ್ಯಾಹ್ನದ ಹೊತ್ತಿಗೆ 2000 ಕ್ಯೂಸೇಕ್ ಗೆ ಏರಿಸುತ್ತೆವೆ. ನಂತರ ಹೆಚ್ಚಿನ ಪ್ರಮಾಣದ ನೀರನ್ನು ಬಾಗಲಕೋಟೆಯವರೆಗೂ ಮುಟ್ಟಿಸುವ ಕೆಲಸ ಮಾಡುತ್ತೆವೆ. ಮಳೆಯ ಪ್ರಮಾಣ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಹೀಗಾಗಿ ಜನರು ಹಾಗೂ ರೈತರು ನೀರನ್ನು ಫೋಲು ಮಾಡದೆ ಮಿತವಾಗಿ ಬಳಸಬೇಕು ಎಂದು ಸಚಿವರು ಹೇಳಿದರು.ಈ ವೇಳೆ ಸಚಿವರ ಆಪ್ತರು ಹಾಗೂ ಧುಪದಾಳ‌ ಗ್ರಾಮದ ಮುಖಂಡರು ಇದ್ದರು.

ಘಟಪ್ರಭಾ ಎಡದಂಡೆ ಕಾಲುವ ವೀಕ್ಷಣೆಯಲ್ಲಿ ಸಚಿವ ಸತೀಶ್!
TV24 News Desk
the authorTV24 News Desk

Leave a Reply