



ಬೆಳಗಾವಿ:
ರಾಜ್ಯ ಸರ್ಕಾರ ರಾಜ್ಯದ ಎಲ್ಲ ಮನೆಗಳಿಗೂ ಸಹ ಗೃಹಜ್ಯೋತಿ ಫ್ರೀಯಾಗಿ ಕೊಡ್ತಿವಿ ಎಂದು ಹೇಳಿ ಈಗಾಗಲೇ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆನ್ನು ಜಾರಿಗೆ ತಂದಿದೆ. ಆದರೆ ಅದೇಎ ಸರ್ಕಾರ ತನ್ನದೇ ಸರ್ಕಾರದ ಕಚೇರಿಯ ವಿದ್ಯುತ್ ಬಿಲ್ ಕಟ್ಟದೇ ಇರುವ ಕಾರಣಕ್ಕೆ ಹೆಸ್ಕಾಂ ಸಿಬ್ಬಂಧಿಗಳು ಸರ್ಕಾರಿ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಹೌದು ಇದು ಇಂತಹದೊಂದು ಅಪರೂಪದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ತಹಶೀಲ್ದಾರ್ ಕಚೇರಿ ಸದ್ಯ ಕತ್ತಲಲ್ಲಿ ಮೊಳಗಿದೆ. ಕಚೇರಿಗೆ ಬರುವ ಸಾರ್ವಜನಿಕರು ಕರೆಂಟ್ ಇಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಳಗಿನಿಂದ ವಿದ್ಯುತ್ ಸಂಪರ್ಕವಿಲ್ಲದೇ ಕಚೇರಿಗೆ ಬರುವ ಜನ ಪರದಾಟ ನಡೆಸಿದ್ದಾರೆ. ಇನ್ನು ಅದೇ ಕತ್ತಲು ಕೊಠಡಿಗಳ ಒಳಗೆ ಕುಳಿತು ಅನಿವಾರ್ಯವಾಗಿ ಕಚೇರಿಯ ಸಿಬ್ಬಂಧಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಕಚೇರಿಯ ಬಿಲ್ ಹೆಸ್ಕಾಂ ಗೆ ಪಾವತಿಯಾಗಿಲ್ಲ. ಹೀಗಾಗಿ ಹೆಸ್ಕಾಂ ಸಿಬ್ಬಂಧಿ ಕರೆಂಟ್ ಕಟ್ ಮಾಡಿದ್ದು ಕಚೇರಿ ಈವರಗೆ ಒಟ್ಟು 40 ಸಾವಿರ ಹಣವನ್ನು ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಸರ್ಕಾರದಿಂದ ವಿದ್ಯುತ್ ಬಿಲ್ ಬಿಡುಗಡೆಯಾದೇ ಇರುವುದೇ ಇದಕ್ಕೆ ಕಾರಣ ಎನ್ನಲಾಗಿದ್ದು ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ತಹಶಿಲ್ದಾರ್ ಹನಮಂತ ಶಿರಹಟ್ಟಿ ಹೆಸ್ಕಾಂ ಸಿಬ್ಬಂಧಿಗೊಂದಿಗೆ ಮಾತನಾಡಿದ್ದು ಅರ್ಧ ಗಂಟೆಯಲ್ಲಿ ಕರೆಂಟ್ ಬರುತ್ತೆ ಎನ್ನುವ ಭರವಸೆ ನೀಡಿದ್ದಾರೆ.










