ಬೆಳಗಾವಿ:
ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು ಮಹಾರಾಷ್ಟ್ರದ ರಾಧಾನಗರಿ ಜಲಾಶಯದ ಸ್ವಯಂ ಚಾಲಿತ ಏಳು ಗೇಟ್ಗಳು ಓಪನ್ ಆಗಿವೆ. ಜಲಾಶಯದಿಂದ ನದಿಗೆ 11500 ಕ್ಯೂಸೇಕ್ ನೀರು ಹರಿದು ಬರುತ್ತಿರುವ ಪರಿಣಾಮ ಕೃಷ್ಣಾ ನದಿಯ ಒಳಹರಿವಿನಲ್ಲೂ ಹೆಚ್ಚಳಗಾವಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಬ್ಯಾರೇಜ್ ಬಳಿ ಕೃಷ್ಣಾ ನದಿಗೆ ಸುಮಾರು 60 ಸಾವಿರ ಕ್ಯೂಸೇಕ್ ಒಳಹರಿವು ದಾಖಲಾಗಿದೆ. ಮಹಾರಾಷ್ಟ್ರದ ರಾಧಾನಗರಿ ಜಲಾಶಯದ 7 ಸ್ವಯಂ ಚಾಲಿತ ಗೇಟ್ ಗಳಿಂದ ಪಂಚಗಂಗಾ ನದಿಗೆ ನೀರು ಹರಿದು ಬರುತ್ತಿರುವ ಪರಿಣಾಮ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ, ದೂಧಗಂಗಾ, ಪಂಚಗಂಗಾ ನದಿಯ ಒಳಹರಿವಿನಲ್ಲೂ ಸಹ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ.













