ಧಾರವಾಡ

ಹುಬ್ಬಳ್ಳಿಗೂ ಬಂತು ವಂದೇ ಭಾರತ್‌ ರೈಲು 

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ  11 ರಂದು ಬೆಂಗಳೂರಿನಿಂದ ಭಾರತದ ಐದನೇ ವಂದೇ ಭಾರತ್‌ಗೆ ಚಾಲನೆ ನೀಡಿದ್ದರು. ಇದು ದಕ್ಷಿಣದ ಮೊದಲ ಸೆಮಿ ಹೈಸ್ಪೀಡ್ ರೈಲಾಗಿದೆ. ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮೈಸೂರು ಮತ್ತು ಚೆನ್ನೈ ನಡುವೆ ಚಲಿಸುತ್ತಿದೆ.ಇದೀಗ ರಾಜ್ಯದ ಇನ್ನೊಂದು ಪ್ರಮುಖ ನಗರಕ್ಕೆ  ವಂದೇ ಭಾರತ್ ರೈಲು ಆರಂಭಗೊಳ್ಳುವ ಸುಳಿವು ದೊರೆತಿದೆ. ಕೇಂದ್ರ ರೈಲ್ವೇ ಮಂಡಳಿ ಬೆಂಗಳೂರು- ಹುಬ್ಬಳ್ಳಿ ವಂದೇ ಭಾರತ್  ಎಕ್ಸ್​ಪ್ರೆಸ್ ಆರಂಭಕ್ಕೆ ವೇಳಾ ಪಟ್ಟಿ ಕೇಳಿ ನೈರುತ್ಯ ರೈಲ್ವೇಗೆ ಪತ್ರ ಬರೆದಿದೆ.
 ತಾತ್ಕಾಲಿವಾಗಿ ಬೆಂಗಳೂರು ಹುಬ್ಬಳ್ಳಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲಿನ ವೇಳಾಪಟ್ಟಿಯನ್ನೂ ಕಳಿಸಲಾಗಿದೆ. ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲು ಸಂಚಾರ ನಡೆಸಲು ರೈಲ್ವೆ ಇಲಾಖೆ ಸಿದ್ದತೆ ನಡೆಸಿದೆ.
ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ 45 ಕಿ.ಮೀ ಉದ್ದದ ಹಳಿ ದ್ವಿಗುಣಗೊಳಿಸುವ ಕಾಮಗಾರಿ ಹಾಗೂ ಎರಡು ಅಥವಾ ಮೂರು ತಿಂಗಳಲ್ಲಿ ವಿದ್ಯುತ್ತೀಕರಣ  ಮಾಡಲಾಗುತ್ತದೆ ಡಿಸೆಂಬರ್ 2022 ರೊಳಗೆ ನಾವು ಅದನ್ನು ಪೂರ್ಣಗೊಳಿಸುತ್ತೇವೆ.  ಮುಂದಿನ ವರ್ಷ ಮಾರ್ಚ್‌ 2023 ರೊಳಗೆ ಉತ್ತರ ಕರ್ನಾಟಕದ ಜನರಿಗೆ ಸಿಹಿ ಸುದ್ದಿ ನೀಡಲಿದ್ದೇವೆ  ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೆಂಗಳೂರು- ಹುಬ್ಬಳ್ಳಿ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲನ್ನು ಧಾರವಾಡಕ್ಕೂ ವಿಸ್ತರಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಡಿಕೆಯಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
TV24 News Desk
the authorTV24 News Desk

Leave a Reply

error: Content is protected !!