ಬೆಳಗಾವಿ:
ವಿದ್ಯುತ್ ಕಂಬವನ್ನೇರಿ ಕೆಪಸ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ. ಇಂದು ವಿದ್ಯುತ್ ಕಂಬವನ್ನೇರಿ ಕೆಲಸ ಮಾಡಿತ್ತಿದ್ದ ವೇಳೆ ಏಕಾಏಕಿ ವಿದ್ಯುತ್ ಪ್ರವಹಿಸಿ ಲೈನ್ ಮ್ಯಾನ್ ಸಾವನ್ನಪ್ಪಿದ್ದಾನೆ. ಮೃತಪಟ್ಟ ಲೈನ್ ಮ್ಯಾನ್ ನನ್ನು ಮಾರುತಿ ಅವಲಿ(25) ಎಂದು ಗುರುತಿಸಲಾಗಿದೆ. ಅಚ್ಚರಿಯ ವಿಚಾರ ಎನೇಂದರೆ ಲೈನ್ ಮ್ಯಾನ್ ಸಾವನ್ನಪ್ಪಿ ಮೂರು ಗಂಟೆಗಳು ಕಳೆದರೂ ಸಹ ಹೆಸ್ಕಾಂ ನ ಯಾವೊಬ್ಬ ಸಿಬ್ಬಂಧಿಯೂ ಸಹ ಸ್ಥಳಕ್ಕೆ ಬಂದಿಲ್ಲ ಹೀಗಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೈನ್ ಮ್ಯಾನ್ ಮೃತದೇಹ ಕಂಬದಲ್ಲಿಯೇ ನೇತಾಡುತ್ತಿದ್ದರೂ ಸಹ ಅಧಿಕಾರಿಗಳು ಬಾರದಿದ್ದಕ್ಕೆ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.



