Uncategorized

ನಾಗವ್ವ ಯಲ್ಲಪ್ಪನ ಜೋಡೆ ಹೋದ್ಳು! ನಾಗವ್ವನ ಮನ್ಯಾವ್ರ ಬಂದ ಯಲ್ಲಪ್ಪನ ಮನೀನ ಒಡದ್ರು!

ಯಲ್ಲಪನ ಜೊತೆ ಹೋಗಿದ್ದ ನಾಗವ್ವ!
ನಾಗವ್ವನ ಜೊತೆ ಪರಾರಿಯಾಗಿದ್ದ ಯುವಕ ಯಲ್ಲಪ್ಪ!

ಬೆಳಗಾವಿ:

ವಿವಾಹಿತೆಯನ್ನು ಓಡಿಸಿಕೊಂಡು ಹೋದ ಪ್ರಿಯಕರ ಯುವಕನ ಮನೆಯನ್ನು ವಿವಾಹಿತೆಯ ಮನೆಯವರು ಸಂಪೂರ್ಣ ದ್ವಂಸ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ‌.ಸಚಿವ ಸತೀಶ್ ಜಾರಕಿಹೊಳಿ‌ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದಲ್ಲಿ ಮತ್ತೊಂದು ಕ್ರೂರ ಕೃತ್ಯ ನಡೆದಿದ್ದು ಮಾರಕಾಸ್ತ್ರ ಸಮೇತ ಇನ್ನೂರಕ್ಕೂ ಅಧಿಕ ಜನರಿಂದ‌ ಯುವಕನ‌ ಮನೆ ಮೇಲೆ ಅಟ್ಯಾಕ್ ನಡೆದಿದೆ.ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆಯ ಹ್ಯೇಯ ಕೃತ್ಯ ನಡೆದಿದ್ದು
ತಲವಾರ, ಜಂಬೆ, ಕುಡಗೋಲು, ಬಡಿಗೆ ಸಮೇತ ‌ಆಗಮಿಸಿ ದುಷ್ಕರ್ಮಿಗಳು ಅಟ್ಟಹಾದ ಮೆರೆದಿದ್ದಾರೆ.ಮನೆಯಲ್ಲಿದ್ದ ಯುವಕನ ಕುಟುಂಬಸ್ಥರ ಹತ್ಯೆಗೂ ಸಹ ದುಷ್ಕರ್ಮಿಗಳು ಯತ್ನಿಸಿದ್ದಾರೆ ಎನ್ನಲಾಗಿದೆ.
ವಿವಾಹಿತೆಯ ಪೋಷಕರು, ಪತಿಯ ಪೋಷಕರಿಂದ‌ ಯುವಕನ ಮನೆ ಮೇಲೆ ದಾಳಿಯಾಗಿದ್ದು ವಿವಾಹಿತೆ ನಾಗವ್ವ ಜೊತೆಗೆ ‌ಎರಡು ದಿನಗಳ ಹಿಂದೆ ಅದೇ ಗ್ರಾಮದ ಯುವಕ ಯಲ್ಲಪ್ಪ ಎಂಬಾತ ಓಡಿ ಹೋಗಿದ್ದ ಎನ್ನಲಾಗಿದೆ.ಕಳೆದ ವರ್ಷ ಬಸಪ್ಪ ನಾಯಕ ‌ಜೊತೆಗೆ ನಾಗವ್ವ ನಾಯಕಳ ವಿವಾಹವಾಗಿತ್ತು ಬಸಪ್ಪ ನಾಯಕ ಹಾಗೂ ಯಲ್ಲಪ್ಪ ನಾಯಕ ಇಬ್ಬರೂ ಸಹ ಆತ್ಮೀಯ ಸ್ನೇಹಿತರೂ ಆಗಿದ್ದರು. ಬೆಳಗಾವಿಯ ಒಂದೇ ಕಂಪನಿಯಲ್ಲಿ ಬಸಪ್ಪ ದಂಪತಿ, ಹಾಗೂ ಯಲ್ಲಪ್ಪ ನಾಯಕ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಉದ್ಯಮಭಾಗದ ಅಶೋಕ್ ಐರನ್ ಕಂಪನಿಯಲ್ಲಿ ಮೂವರು ಕೆಲಸ‌ ಮಾಡುತ್ತಿದ್ದರು ಎನ್ನಲಾಗಿದೆ.ಈ ವೇಳೆ ಸಲುಗೆ ಬೆಳೆದು ನಾಗವ್ವ ಜೊತೆಗೆ ಯಲ್ಲಪ್ಪ ನಾಯಕ ಓಡಿ ಹೋಗಿದ್ದ ಎನ್ನಲಾಗಿದೆ.ಇದರಿಂದ ಆಕ್ರೋಶಗೊಂಡು ಯಲ್ಲಪ್ಪ ನಾಯಕ ಕುಟುಂಬಸ್ಥರನ್ನು ಟಾರ್ಗೆಟ್ ಮಾಡಿ ಮನೆಯ ಮೇಲೆ ದಾಳಿ ಮಾಡಿದ್ದಾರೆ‌.
ದಾಳಿ ವೇಳೆ ಮನೆಯ ಹಂಚುಗಳು ಪುಡಿ ಪುಡಿಯಾಗಿದ್ದು ಮನೆಯಲ್ಲಿದ್ದ ಅಲ್ಮಾರಿ, ಟಿವಿ ದ್ವಂಸವಾಗಿದೆ.ಇನ್ನು ಪ್ರಾಣ ಉಳಿಸಿಕೊಳ್ಳಲು ಯಲ್ಲಪ್ಪನ ಮನೆಯ ಸದಸ್ಯರು ಓಡಿ ಹೋಗಿದ್ದಾರೆ‌ ಎನ್ನಲಾಗಿದೆ.
ದಾಳಿ ನಂತರ ಮನೆಯಲ್ಲಿದ್ದ ಚಿನ್ನಾಭರಣ, ಹಣ, 25 ಕುರಿ ಜೊತೆಗೆ ದುಷ್ಕರ್ಮಿಗಳು ಪರಾರಿಯಾದ ಆರೋಪವೂ ಸಹ ಕೇಳಿ ಬಂದಿದೆ.ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕಾಗಿ ನಗರ ಪೊಲೀಸ್ ಆಯುಕ್ತರ ಮೊರೆಯನ್ನು ‌ಸಂತ್ರಸ್ತ ಕುಟುಂಬ ಹೋಗಿದ್ದು ಈ ಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

TV24 News Desk
the authorTV24 News Desk

Leave a Reply